ಧರ್ಮಸ್ಥಳ ಪ್ರಕರಣ: ದರ್ಶನ್ ತಾಯಿ ಕೂಡ ಬಂದಿದ್ದರು-ಸ್ಥಳೀಯರ ಹೇಳಿಕೆ

ಧರ್ಮಸ್ಥಳ ಪ್ರಕರಣ: ದರ್ಶನ್ ತಾಯಿ ಕೂಡ ಬಂದಿದ್ದರು-ಸ್ಥಳೀಯರ ಹೇಳಿಕೆ

ಮಂಗಳೂರು: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್‌ಐಟಿ) ಅನಾಮಿಕ ವ್ಯಕ್ತಿಯೊಂದಿಗೆ ನಡೆಸಿದ 13 ಸ್ಥಳ ಮಹಜರು, ಈ ಸ್ಥಳಗಳಲ್ಲಿ ಕಳೇಬರದ ಅವಶೇಷಗಳಿಗಾಗಿ ನಡೆಯುತ್ತಿರುವ ಉತ್ಖನನ ಕಾರ್ಯಾಚರಣೆ ಕಳೆದ ಐದಾರು ದಿನಗಳಿಂದ ಸಾರ್ವಜನಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ನಡುವೆ ಸ್ಥಳೀಯರು ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಂದಿಡುತ್ತಿದ್ದಾರೆ. 

ಅತ್ಯಾಚಾರ ಕೊಲೆ ನಡೆದಿಲ್ಲ..:

ಸ್ಥಳೀಯರಾದ  ಶಂಕರ್ ಕುಲಾಲ್ ಮಾತನಾಡಿ ಇಲ್ಲಿ ಯಾವುದೇ  ಅತ್ಯಾಚಾರ ಅಥವಾ ಕೊಲೆ ನಡೆದಿಲ್ಲ ಎಂದಿದ್ದಾರೆ.

ಧರ್ಮಸ್ಥಳವು ಅಭಿವೃದ್ಧಿಯ ಹಾದಿಯಲ್ಲಿ ನಡೆಯುತ್ತಿರುವ ವಿಶಿಷ್ಟ ಗ್ರಾಮ. ಇಲ್ಲಿ ನಡೆದ ಅಭಿವೃದ್ಧಿ ಕಾರ್ಯವನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ. ಇಲ್ಲಿಯ ಧಾರ್ಮಿಕ ಮತ್ತು ಸಾಮಾಜಿಕ ಸೇವೆಯನ್ನು ಯಾರೂ ಕಣ್ಮರೆ ಮಾಡಲಾಗದು. ಹಿಂದಿನ ದಿನಗಳಲ್ಲಿ ಇಲ್ಲಿ ಸ್ಮಶಾನ ಇರಲಿಲ್ಲ. ಅಂತಹ ಸಮಯದಲ್ಲಿ ಕೆಲವರು ಶವವನ್ನು ಇಲ್ಲಿ ಹೂಳುತ್ತಿದ್ದರು ಇದರಲ್ಲಿ ಅಚ್ಚರಿ ಇಲ್ಲ. ಅದು ಪೊಲೀಸ್ ಠಾಣೆಯ ಕಡತಗಳಲ್ಲಿ ದಾಖಲಾಗುತ್ತಿದ್ದವು. ಕೆಲವು ಶವಗಳು ಈ ಹಿಂದೆ ಇಲ್ಲಿ ಪತ್ತೆಯಾಗಿರುವುದು ಸತ್ಯ. ಆದರೆ ಅವು ಅಪರಾಧ ಸಂಬಂಧಿತ ಶಂಕೆಗೊಳಪಟ್ಟಿಲ್ಲ ಎಂದಿದ್ದಾರೆ.

ದರ್ಶನ್ ತಾಯಿ ಕೂಡ ಬಂದಿದ್ದರು..:

ನಟ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಕೂಡ ಗಂಡನ ಸಾವಿನ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಇಲ್ಲಿ ಬಂದಿದ್ದರು. ಆದರೆ ಹೆಗಡೆಯವರ ಬಳಿ ಹೋಗಿ ಆಶೀರ್ವಾದ ಪಡೆದು, ಅವರ ಧೈರ್ಯದಿಂದ ಬದುಕು ಮುಂದುವರಿಸಿದ್ದಾರೆ. ಇಂದು ಅವರು ತಮ್ಮ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇದು ಹೆಗಡೆಯವರ ಮಾತುಗಳಿಂದ ಎಷ್ಟು ಜೀವಗಳು ಉಳಿದಿವೆ ಎಂಬುದಕ್ಕೆ ಸಾಕ್ಷಿ ಎಂದರು.

ಧರ್ಮಸ್ಥಳದ ಮೇಲೆ ನಂಬಿಕೆ..:

ಇಲ್ಲಿ ಜನ ಆತ್ಮಹತ್ಯೆ ಮಾಡಿಕೊಳ್ಳಲು ಬರುತ್ತಾರೆ ಎಂಬುದು ಸತ್ಯ. ಆದರೆ ಈಗ ಕಟ್ಟೆ ಕಟ್ಟಿದ ನಂತರ ಸುರಕ್ಷತೆ ಒದಗಿಸಲಾಗಿದೆ. ಇಲ್ಲಿ ಯಾರೂ ಕೊಲೆ ಮಾಡಿಲ್ಲ. ನನಗೆ ತಿಳಿದ ಮಟ್ಟಿಗೆ ಧರ್ಮಸ್ಥಳದಲ್ಲಿ ಯಾವ ಕೊಲೆ ಪ್ರಕರಣವೂ ನಡೆದಿಲ್ಲ. ಎಸ್‌ಐಟಿ ತನಿಖೆಯನ್ನು ಸ್ವಾಗತಿಸುತ್ತೇವೆ. ಎಸ್‌ಐಟಿ ಉತ್ತಮವಾಗಿ ತನಿಖೆ ಮಾಡುತ್ತಿದೆ. ಶವಗಳ ಗುರುತು ಪತ್ತೆಯಾಗಲಿ. ಆದರೆ ಜನರು ನಿಜಕ್ಕಿಂತ ಸುಳ್ಳನ್ನೇ ಹೆಚ್ಚು ನಂಬುತ್ತಾರೆ. ಸತ್ಯಕ್ಕೆ ಯಾರೂ ಬೆಲೆ ಕೊಡುವುದಿಲ್ಲ, ಆದರೂ ಈ ತನಿಖೆಯಿಂದ ಸತ್ಯ ಹೊರಬರುತ್ತದೆ ಎಂಬ ಭರವಸೆ  ಇದೆ ಎಂದಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article