ಕಳೇಬರ ಅವಶೇಷ ಪರೀಕ್ಷೆಗಾಗಿ ಉಡುಪಿ ಕೆಎಂಸಿಗೆ

ಕಳೇಬರ ಅವಶೇಷ ಪರೀಕ್ಷೆಗಾಗಿ ಉಡುಪಿ ಕೆಎಂಸಿಗೆ

ಮಂಗಳೂರು: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್‌ಐಟಿ)ದ ತನಿಖೆಯ ವೇಳೆ ಗುರುವಾರ ಆರನೇ ಜಾಗದ ಬಳಿ ಪತ್ತೆಯಾದ ಅಸ್ಥಿಪಂಜರದ ಭಾಗಗಳನ್ನು ಪರೀಕ್ಷೆಗಾಗಿ ಉಡುಪಿ ಮಣಿಪಾಲದ ಕೆಎಂಸಿ ವೈದ್ಯಕೀಯ  ಕಾಲೇಜಿಗೆ ರವಾನಿಸಲಾಗಿದೆ. 

ಈ ಕಾಲೇಜಿನಲ್ಲಿ ಫಾರೆನ್ಸಿಕ್ ವಿಶ್ಲೇಷಣೆ ನಡೆಯುವ ಸಾಧ್ಯತೆ ಇದೆ. ಈ ಹಿಂದೆ ಶಿರೂರು ಸ್ವಾಮೀಜಿಯ ಪ್ರಕರಣದಲ್ಲಿ ಸಹ ಇದೇ ಸಂಸ್ಥೆಯ ತಜ್ಞರಿಂದ ಫಾರೆನ್ಸಿಕ್ ಪರೀಕ್ಷೆ ನಡೆದಿತ್ತು. ಅದೇ ಹಿನ್ನೆಲೆಯಲ್ಲಿ ಅಲ್ಲಿನ ತಜ್ಞರಿಂದಲೇ ಫೊರೆನ್ಸಿಕ್ ಪರಿಶೀಲನೆ ಸಾಧ್ಯತೆ ಇದೆ. 

ಎಲ್ಲಾ ಎಲುಬುಗಳ ಪ್ರಾಥಮಿಕ ದೃಶ್ಯ ಪರಿಶೀಲನೆ ಮೂಲಕ ಆರಂಭವಾಗುತ್ತದೆ. ಮೊದಲು ಈ ಅಸ್ಥಿಪಂಜರ ಮಾನವನದ್ದ ಅಥವಾ ಪ್ರಾಣಿಯದ್ದ ಎಂಬುದನ್ನು ಸ್ಪಷ್ಟಪಡಿಸಲಾಗುತ್ತದೆ. ಇದರಲ್ಲಿ ಎಲುಬಿನ ಬಣ್ಣ, ಗಟ್ಟಿತನ, ವಕ್ರತೆ ಇತ್ಯಾದಿಗಳನ್ನು ಆಧರಿಸಲಾಗುತ್ತದೆ. ಎಫ್‌ಎಸ್‌ಎಲ್ ತಂಡವು ಎಲುಬಿನಲ್ಲಿ ಹಗುರ ಅಥವಾ ಗಂಭೀರ ಪೆಟ್ಟುಗಳು ಇದ್ದವೆಯಾ, ಬಿರುಕುಗಳ ಲಕ್ಷಣಗಳಿವೆಯಾ ಎಂಬುದನ್ನು ಪರಿಶೀಲಿಸುತ್ತಾರೆ. ಇದರ ಮೂಲಕ ಶವದ ಮೃತ್ಯುವಿನ ಶೈಲಿ, ಹತ್ಯೆ ಆಗಿದೆಯೇ ಅಥವಾ ನೈಸರ್ಗಿಕ ಸಾವೇ ಎಂಬುದು ಅಂದಾಜು ಮಾಡಲಾಗುತ್ತದೆ.

ಪ್ಯಾನ್ ಕಾರ್ಡ್ ಸುರೇಶ್‌ರದ್ದು..:

ಜಾಗ ಒಂದರಲ್ಲಿ ದೊರೆತ ಪ್ಯಾನ್ ಕಾರ್ಡ್ ಬೆಂಗಳೂರಿಗೆ ಹೊರವಲಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ನಿವಾಸಿಯಾಗಿದ್ದ ಸುರೇಶ್ ಎಂವರರಿಗೆ ಸೇರಿದ್ದು ಎಂದು ತನಿಖೆಯಿಂದ ಬಹಿರಂಗಗೊಂಡಿದೆ.

ಗಂಗಮರಿಯಪ್ಪ ಹಾಗೂ ಸಿದ್ದಲಕ್ಷ್ಮಮ್ಮ ಎಂಬವರ ಪುತ್ರ ಸುರೇಶ್ ಎಂಬವರಲ್ಲಿ ಎರಡು ಪ್ಯಾನ್ ಇತ್ತು. ಪಒಂದು ಸುರೇಶ್ ಎಂಬಾತನ ಪ್ಯಾನ್ ಕಾರ್ಡ್ ಮತ್ತೊಂದು ಅವರ ತಾಯಿ ಸಿದ್ದಲಕ್ಷ್ಮಮ್ಮ ಅವರ ಪ್ಯಾನ್ ಕಾರ್ಡ್ ಎಂಬುದು ಬಹಿರಂಗವಾಗಿತ್ತು. ಎರಡು ವರ್ಷಗಳ ಹಿಂದೆ ಮನೆ ಬಿಟ್ಟು ತೆರಳಿದ್ದ ಸುರೇಶ್ ಆಗ ಧರ್ಮಸ್ಥಳಕ್ಕೆ ತೆರಳಿದ್ದ ಎನ್ನಲಾಗಿದೆ. ಮಾರ್ಚ್ ತಿಂಗಳಲ್ಲಿ ಜಾಂಡಿಸ್‌ನಿಂದಾಗಿ  ಸುರೇಶ್ ಸಾವನ್ನಪ್ಪಿದ್ದರು. ಸಿದ್ದಲಕ್ಷ್ಮಮ್ಮ ಬದುಕಿದ್ದಾರೆ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article