
ಭರತನಾಟ್ಯ ಪರೀಕ್ಷೆ: ಶ್ರೀಮಯಿ ಜಿ.ಎಸ್. ಉತ್ತೀರ್ಣ
Friday, August 29, 2025
ಮಂಗಳೂರು: ಗಂಗೂಬಾಯಿ ಹಾನಗಲ್ ವಿಶ್ವ ವಿದ್ಯಾನಿಲಯವು 2025ನೇ ಸಾಲಿನಲ್ಲಿ ನಡೆಸಿದ ಕರ್ನಾಟಕ ಭರತನಾಟ್ಯ ಪರೀಕ್ಷೆಯ ಜೂನಿಯರ್ ವಿಭಾಗದಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯದ ೮ನೇ ತರಗತಿ ವಿದ್ಯಾರ್ಥಿನಿ ಶ್ರೀಮಯಿ ಜಿ.ಎಸ್. ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಅವರು ಶೇ.97.25 ಅಂಕ ಗಳಿಸಿದ್ದಾರೆ. ಈಕೆ ಸವಿಜೀವನಂ ನೃತ್ಯಕಲಾಕ್ಷೇತ್ರ, ಕೊಡಿಯಾಲ್ ಬೈಲ್, ಮಂಗಳೂರು ಇದರ ನೃತ್ಯ ನಿರ್ದೇಶಕಿ ಸವಿತಾ ಜೀವನ ಇವರ ಶಿಷ್ಯೆ. ಮಂಗಳೂರಿನ ಲೆಕ್ಕ ಪರಿಶೋಧಕ ಶಿವಕುಮಾರ್ ಹಾಗೂ ಶ್ರೀನಿವಾಸ್ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕಿ ಸಹನಾ ಜಿ.ಕೆ. ದಂಪತಿಯ ಪುತ್ರಿ.