ಅನನ್ಯ ಭಟ್ ನಾಪತ್ತೆ ಪ್ರಕರಣ: ಎಸ್.ಐ.ಟಿ.ಗೆ ಹಸ್ತಾಂತರ
Wednesday, August 20, 2025
ಮಂಗಳೂರು: ಅನನ್ಯ ಭಟ್ ಎಂಬ ಹೆಸರಿನ ವೈದ್ಯಕೀಯ ವಿಧ್ಯಾರ್ಥಿನಿಯು 2003 ರಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಕಣ್ಮರೆಯಾಗಿರುವ ಬಗ್ಗೆ ಯುವತಿಯ ತಾಯಿ 15.07.2025 ರಂದು ಧರ್ಮಸ್ಥಳ ಠಾಣೆಯಲ್ಲಿ ನೀಡಿದ್ದ ದೂರು ಅರ್ಜಿಯನ್ನು No:175/PTN/DPS/2025 ರಂತೆ ಸ್ವಿಕರಿಸಲಾಗಿದ್ದು, ಸದ್ರಿ ದೂರು ಅರ್ಜಿಯನ್ನು ಡಿ.ಜಿ. ಮತ್ತು ಐ.ಜಿ.ಪಿ ಅವರು 19.08.2025 ರಂದು ನೀಡಿದ ಆದೇಶದ ಮೇರೆಗೆ ಮುಂದಿನ ವಿಚಾರಣೆಗಾಗಿ ವಿಶೇಷ ತನಿಖಾ ತಂಡ (SIT)ಕ್ಕೆ ಹಸ್ತಾಂತರಿಸಲಾಗಿದೆ.