ಫಾ. ವಿನ್ಸೆಂಟ್ ಮೊಂತೇರೊ ನಿಧನ

ಫಾ. ವಿನ್ಸೆಂಟ್ ಮೊಂತೇರೊ ನಿಧನ


ಮಂಗಳೂರು: ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಗುರು ಫಾ. ವಿನ್ಸೆಂಟ್ ಮೊಂತೇರೊ (71) ಅವರು ಮಂಗಳೂರಿನ ಜಪ್ಪು ಸೈಂಟ್ ಜೋಸೆಫ್ ವಾಜ್ ಹೋಂ ನಲ್ಲಿ ಶುಕ್ರವಾರ ನಿಧನ ಹೊಂದಿದರು. 

ಮೂಲತ: ಮಂಗಳೂರಿನ ಆಂಜೆಲೋರ್ ಚರ್ಚ್ ವ್ಯಾಪ್ತಿಯ ನಿವಾಸಿಯಾಗಿದ್ದ ಫಾ. ವಿನ್ಸೆಂಟ್ ಮೊಂತೇರೊ ಅವರು 1981 ರಲ್ಲಿ ಧರ್ಮಗುರು ದೀಕ್ಷೆ ಸ್ವೀಕರಿಸಿದ್ದರು. ಬಳಿಕ ನಾಲ್ಕು ದಶಕಗಳ ಕಾಲ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. ಕಿನ್ನಿಗೋಳಿ ಸಮೀಪದ ಕಿರೆಮ್ ಚರ್ಚ್ ನಲ್ಲಿ ಸಹಾಯಕ ಗುರುಗಳಾಗಿ ಮತ್ತು ಬಳಿಕ ಮಂಗಳೂರಿನ ಜಪ್ಪು ಸಂತ ಅಂತೋನಿ ಆಶ್ರಮದ ಸಹಾಯಕ ನಿರ್ದೇಶಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದ್ದರು. ಧಾರ್ಮಿಕ ಸೇವೆಯ ಜತೆಗೆ ಮಂಗಳೂರು ಧರ್ಮ ಪ್ರಾಂತ್ಯದ ಯುವಜನರ ಸಂಘಟನೆಗಳಾದ ಐಸಿಯವೈಎಂ, ವೈಸಿಎಸ್ ಮತ್ತು ವೈಎಸ್‌ಎಂ ನಿರ್ದೇಶಕರಾಗಿ ಹಾಗೂ ಬಳಿಕ ಪ್ರಾದೇಶಿಕ ನಿರ್ದೇಶಕ ಮತ್ತು 1989-1995 ಅವಧಿಯಲ್ಲಿ ರಾಷ್ಟ್ರೀಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಯುವಜನ ಸೇವೆಯಲ್ಲಿನ ಬದ್ಧತೆಯನ್ನು ಗುರುತಿಸಿ 2004 ರಲ್ಲಿ ವೈಸಿಎಸ್ನ ಏಷ್ಯಾ ವಿಭಾಗದ ಚಾಪ್ಲೈನ್ ಆಗಿಯೂ ಅವರನ್ನು ನೇಮಕ ಮಾಡಲಾಗಿತ್ತು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article