ಮಟ್ಟೆಣ್ಣನವರ್ ಸ್ವಾಗತ

ಮಟ್ಟೆಣ್ಣನವರ್ ಸ್ವಾಗತ


ಮಂಗಳೂರು: ಸಾಕ್ಷಿ ದೂರುದಾರನನ್ನು ಎಸ್.ಐ.ಟಿ ತಂಡ ವಶಕ್ಕೆ ಪಡೆದಿರುವುದನ್ನು ಸ್ವಾಗತಿಸುತ್ತೇನೆ. ತನಿಖೆಯ ದೃಷ್ಟಿಯಿಂದ ಇದು ಉತ್ತಮ ವಿಚಾರ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿಕೆ ನೀಡಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಕ್ಷಿ ದೂರುದಾರನನ್ನು ವಶಕ್ಕೆ ಪಡೆದಿದ್ದೇವೆ ಎಂಬ ಕಾರಣಕ್ಕೆ ಎಸ್.ಐ.ಟಿ ತನಿಖೆಯ ಬಗ್ಗೆ ಯಾವುದೇ ಅನುಮಾನದ ಅಗತ್ಯವಿಲ್ಲ. ಎಸ್.ಐ.ಟಿ ತಂಡ ಅಗತ್ಯವಿದ್ದಲ್ಲಿ ಆತನ ಮಂಪರು ಪರೀಕ್ಷೆಯನ್ನು ನಡೆಸಲಿ ಎಂದರು. 

ಯಾವರೀತಿ ಬೇಕಾದರೂ ತನಿಖೆ ನಡೆಸಲಿ ಎಂದು ಆರಂಭದಲ್ಲಿಯೇ ಸಾಕ್ಷಿ ದೂರುದಾರ ಹೇಳಿದ್ದಾನೆ. ಅದನ್ನು ಹೋರಾಟಗಾರರೂ ಹೇಳಿದ್ದಾರೆ. ಅದಕ್ಕಾಗಿಯೇ ಎಸ್.ಐ.ಟಿ ರಚನೆಯಾಗಿದೆ. ಸಾಕ್ಷಿ ದೂರುದಾರ ಎಸ್. ಐ.ಟಿ ಮುಂದೆ ಏನು ಹೇಳಿಕೆ ನೀಡಿದ್ದಾನೆ ಎಂಬುದನ್ನು ಎಸ್.ಐ.ಟಿ ಅಧಿಕಾರಿಗಳೇ ಹೇಳಬೇಕಾಗಿದೆ. ಅದರ ಬಗ್ಗೆ ತಿಳಿದಿಲ್ಲ ಇದು ಸತ್ಯದ ಪರವಾದ ಹೋರಾಟ. ಅದರಲ್ಲಿ ಸತ್ಯಕ್ಕೆ ಗೆಲುವು ಸಿಗುತ್ತದೆ ಎಂದು ಹೇಳಿದರು.

ಸುಜಾತಾ ಭಟ್ ವಿಚಾರದಲ್ಲಿ ಅವರೇ ಹೇಳಿಕೆಗಳನ್ನು ನೀಡಿದ್ದಾರೆ ಅದರ ಬಗ್ಗೆ ಎಸ್.ಐ.ಟಿ ತನಿಖೆ ನಡೆಸಲಿ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article