
ಶ್ರೀ ಪತಂಜಲಿ ಯೋಗ ಪ್ರತಿಷ್ಠಾನದಿಂದ ‘ಆಟಿಡೊಂಜಿ ದಿನ’
Wednesday, August 13, 2025
ಮಂಗಳೂರು: ಶ್ರೀ ಪತಂಜಲಿ ಯೋಗ ಪ್ರತಿಷ್ಠಾನದ ಕದ್ರಿ ಶಾಖೆಯ ಯೋಗ ಬಂಧುಗಳು ಆ.5 ರಂದು ಸಂಜೆ ‘ಆಟಿಡೊಂಜಿ ದಿನ’ ಕಾರ್ಯಕ್ರಮವನ್ನು ಕದ್ರಿ ಮಲ್ಲಿಕಟ್ಟೆಯ ಲಯನ್ಸ್ ಸಭಾಂಗಣದಲ್ಲಿ ಆಚರಿಸಿದರು.
ಈ ಸಂದರ್ಭದಲ್ಲಿ ಸಂಜೆ ಶಾಖೆಯ ದಶಮಾನೋತ್ಸವ ಮತ್ತು ಬೆಳಗ್ಗಿನ ಶಾಖೆಯ 15ನೇ ವರ್ಷದ ಸಂಭ್ರಮ, ಗುರುವಂದನೆ ಮತ್ತು ಶಾಖೆಯ ಮುಖ್ಯಸ್ಥ ಸುಬ್ರಹ್ಮಣ್ಯ ಭಟ್ ಅವರ 75 ವರ್ಷ ಪೂರೈಸಿದ ಸಂಭ್ರಮಾಚರಣೆ ಮಾಡಿದರು.
ಪ್ರತಿಷ್ಠಾನದ ಅಧ್ಯಕ್ಷ ಏಕನಾಥ ಬಾಳಿಗ, ಉಪಾಧ್ಯಕ್ಷ ಯೋಗೀಶ್ ಶೆಟ್ಟಿ, ಕಾರ್ಯದರ್ಶಿ ಧನಂಜಯ್ ಹಾಗೂ ಎಲ್ಲಾ ಟ್ರಸ್ಟಿಗಳು ಹಾಜರಿದ್ದು ಮುಖ್ಯ ಅತಿಥಿಗಳಾಗಿ ರತ್ನಾವತಿ ಬೈಕಾಡಿ ಅವರು ಆಗಮಿಸಿ ಆಟಿ ತಿಂಗಳ ವಿಶೇಷತೆ ಬಗ್ಗೆ ಮಾಹಿತಿ ನೀಡಿದರು. ಎಲ್ಲಾ ಯೋಗ ಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪ್ರಸಾದ್ ಕಣ್ಣೂರ್ ಅವರು ಕಾರ್ಯಕ್ರಮ ನಿರೂಪಿಸಿದರು.