
ಎರಡನೇ ಬಾರಿ ವೃತ್ತ ಏರಿ ಕುಳಿತ ಮಾನಸಿಕ ಅಸ್ವಸ್ಥೆಯನ್ನು ಕೆಳಗಿಳಿಸಿದ ಪೊಲೀಸರು
Wednesday, August 13, 2025
ಮೂಡುಬಿದಿರೆ: ಬುಧವಾರ ಬೆಳಗ್ಗೆ ಖಾಸಗಿ ಬಸ್ ನಿಲ್ದಾಣದಲ್ಲಿ ವೃತ್ತವೇರಿ ಕುಳಿತಿದ್ದ ಮಾನಸಿಕ ಅಸ್ವಸ್ಥೆಯನ್ನು ಮೂಡುಬಿದಿರೆ ಪೊಲೀಸರು ಕೆಳಗಿಸಿದ್ದಾರೆ.
ತನ್ನ ಸಮಸ್ಯೆಯನ್ನು ಆಲಿಸಲು ಡಿಸಿ ಬರಬೇಕೆಂದು" ಹಠ ಹಿಡಿದು ಕುಳಿತಿದ್ದ ಬೆಳ್ತಂಗಡಿ ತಾಲೂಕಿನ ಪೆರಿಂಜೆಯವರು ಮಹಿಳೆಯನ್ನು ಪೊಲೀಸರು ಹಾಗೂ ಸಾರ್ವಜನಿಕರು ಅವರ ಬಳಿ ಮಾತನಾಡಿದಾಗ, 'ನಿಮ್ಮಲ್ಲಿ ಮಾತಾಡುವುದಿಲ್ಲ, ನೇರ ಡಿಸಿ ಜೊತೆಗೆ ಮಾತನಾಡಬೇಕು. ನನ್ನ ಸಮಸ್ಯೆಯನ್ನು ಅವರ ಮುಂದೆ ಮಾತ್ರ ಹೇಳುತ್ತೇನೆ' ಎಂದು ಹಠ ತೊಟ್ಟಿದ್ದರು ಆದರೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಕೆಯನ್ನು ಸಮಧಾನ ಪಡಿಸಿ ಕೆಳಗಿಳಿಸಿದ್ದಾರೆ.
ವೃತ್ತವೇರಿ ಕುಳಿತಿದ್ದ ಮಹಿಳೆಯನ್ನು ಇದೀಗ ಎರಡನೇ ಬಾರಿಗೆ ಕೆಳಗಿಳಿಸಿರುವುದಾಗಿದೆ.