ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ‘ಹೊಸ ಲಾಂಚನ’

ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ‘ಹೊಸ ಲಾಂಚನ’


ಮ೦ಗಳೂರು: ‘ಒಂದು ರಾಜ್ಯ, ಒಂದು ಗ್ರಾಮೀಣ ಬ್ಯಾಂಕ್’ ಪರಿಕಲ್ಪನೆಯಡಿಯಲ್ಲಿ, ಮೇ 1, 2025 ರಂದು ಕರ್ನಾಟಕದ ಎರಡು ಗ್ರಾಮೀಣ ಬ್ಯಾಂಕುಗಳು ಪರಸ್ಪರ ವಿಲೀನಗೊಂಡು ಕರ್ನಾಟಕ ಗ್ರಾಮೀಣ ಬ್ಯಾಂಕ್ ಉದಯಗೊಂಡಿತ್ತು. ಈ ನಿಟ್ಟಿನಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ 1,750 ಶಾಖೆಗಳ ಮೂಲಕ ರಾಜ್ಯಾದ್ಯಂತ ಸೇವೆಗಳನ್ನು ವಿಸ್ತರಿಸುವಂತಾಗಿದೆಯಲ್ಲದೆ ಪ್ರಸ್ತುತ 1,03,451 ಕೋಟಿಗೂ ಹೆಚ್ಚಿನ ವಹಿವಾಟು ಮಾಡುತ್ತಲಿದೆ.


ಇದೀಗ ಮರು ಬ್ರಾಂಡಿಂಗ್ ಕಾರ್ಯದ ಭಾಗವಾಗಿ, ವಿಲೀನಾ ನಂತರದ ರಾಷ್ಟ್ರದ ಎಲ್ಲಾ 11 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ ವಿನ್ಯಾಸಗೊಳಿಸಲಾದ ಸಾಮಾನ್ಯ ಲಾಂಚನವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕು ಕೂಡ ಅಳವಡಿಸಿಕೊಂಡಿದೆ. ಈ ಹೊಸ ಲೋಗೋವನ್ನು ಶುಕ್ರವಾರ ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ್ ಎಂ. ಭಂಡಿವಾಡ್ ಅವರು ಅಧಿಕೃತವಾಗಿ ಅನಾವರಣಗೊಳಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಕಾಂತ್ ಎಂ. ಭಂಡಿವಾಡ್ ಅವರು, ನೂತನ ಲೋಗೋ ಪ್ರಗತಿ, ಬೆಳವಣಿಗೆ, ಪೋಷಣೆ ಮತ್ತು ಕಾಳಜಿಯನ್ನು ಪ್ರತಿಬಿಂಬಿಸುತ್ತದೆ ಎಂದು ವಿವರಿಸಿದರು. ಲೋಗೋದಲ್ಲಿ ಬಳಸಲಾದ ಎರಡು ಬಣ್ಣಗಳು ವಿಶೇಷ ಅರ್ಥವನ್ನು ಹೊಂದಿದ್ದು, ಕಡು ನೀಲಿ ಹಣಕಾಸು ಮತ್ತು ವಿಶ್ವಾಸವನ್ನು ಪ್ರತಿನಿಧಿಸಿದರೆ, ಕಡು ಹಸಿರು ಜೀವನ ಮತ್ತು ಬೆಳವಣಿಗೆಯನ್ನು ಸೂಚಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕಿ ಮಾಹಾ ಪ್ರಬಂಧಕರು, ಉನ್ನತ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article