ಶಿಕಾರಿಪುರ ಈಶ್ವರ ಭಟ್ ಅವರ ‘ಆರ್‌ಎಸ್‌ಎಸ್ 100: ಶತ ಪಥ’ ಸಂಚಲನ ಕೃತಿ ಬಿಡುಗಡೆ
ವಿದ್ಯಾರ್ಥಿ ಪರಿಷತ್‌ನ ರಾಜ್ಯಾಧ್ಯಕ್ಷ, ಲೇಖಕ, ಪ್ರಾಧ್ಯಾಪಕ ಡಾ. ರವಿ ಮಂಡ್ಯ ಅವರು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಮೂಡುಬಿದಿರೆ ಶತಮಾನ ಕಾಣುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಂದು ಹಳ್ಳಿಹಳ್ಳಿಗಳಲ್ಲಿ ಪಸರಿಸಿ ದೇಶ ಮಾತ್ರವಲ್ಲ ವಿದೇಶದಲ್ಲೂ ವಿಸ್ತರಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಆರ್‌ಎಸ್‌ಎಸ್ ಸಕ್ರಿಯವಾಗಿತ್ತು. ತೀರಾ ಇತ್ತೀಚಿನ ಪೆಹಲ್ಗಾಂವ್ ದುರಂತ, ಗುಜರಾತ್ ವಿಮಾನ ದುರಂತದ ವೇಳೆಯೂ ಆರೆಸ್ಸೆಸ್ ಕಾರ್ಯಕರ್ತರು ಅಲ್ಲಿ ಸೇವಾ ನಿರತರಾಗಿದ್ದರು.
1979ರಲ್ಲಿ ಗುಜರಾತ್‌ನ ಮೋರ್ವಿಯಲ್ಲಿ ಮಚ್ಚು ಅಣೆಕಟ್ಟು ಒಡೆದು ಬೀದಿಪಾಲಾದ 12 ಸಾವಿರ ಮುಸ್ಲಿಂ ಕುಟುಂಬಗಳಿಗೆ ರಂಜಾನ್‌ನ ಆ ಸಮಯದಲ್ಲೂ ಉಪವಾಸ, ಆಹಾರ ವ್ಯವಸ್ಥೆ ಒದಗಿಸುವಲ್ಲಿ ಆರೆಸ್ಸೆಸ್ ತೋರಿದ ಸೇವಾ ಬದ್ಧತೆ ಗಮನಾರ್ಹ ಎಂದು ಹೇಳಿದರು.
ಬೆಂಗಳೂರು ವಿದ್ಯಾಭಾರತಿ ಸಂಸ್ಥೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು.
ಲೇಖಕ ಶಿಕಾರಿಪುರ ಈಶ್ವರ ಭಟ್ ಸಜ್ಜನರ ಶಕ್ತಿಯ ನಿಷ್ಕ್ರಿಯತೆ ಅಪಾಯಕಾರಿ ಎಂದರು. ಸಂಘದ ಕಾರ್ಯವು ದೇಶದ, ದೇವರ ಕಾರ್ಯವಾಗಿದ್ದು ರಾಷ್ಟ್ರ ಧರ್ಮವಾಗಿದೆ ಎಂದರು.
ರೋಹನ್ ಅತಿಕಾರಿ ಬೆಟ್ಟು ಕಾರ್ಯಕ್ರಮ ನಿರೂಪಿಸಿ, ವೆಂಕಟರಮಣ ಕೆರೆಗದ್ದೆ ವಂದಿಸಿದರು. ಹೆಚ್.ಎನ್. ನಟರಾಜ್ ಆಶಯ ಗಾನ ಹಾಡಿದರು.