ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟ 2025: ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ಗೆ 42 ಪದಕ

ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟ 2025: ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ಗೆ 42 ಪದಕ


ಮೂಡುಬಿದಿರೆ: ಉಡುಪಿ ಜಿಲ್ಲಾ  ಅಥ್ಲೆಟಿಕ್ಸ್ ಸಂಸ್ಥೆ(ರಿ.) ವತಿಯಿಂದ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್‌ನ ಕ್ರೀಡಾಪಟುಗಳಿಗೆ 19 ಚಿನ್ನ, 15 ಬೆಳ್ಳಿ, 8 ಕಂಚು ಒಟ್ಟು 42 ಪದಕಗಳು, 3 ನೂತನ ಕೂಟ ದಾಖಲೆ ಹಾಗೂ 1 ವಿಭಾಗ ಕ್ರೀಡಾಕೂಟದ ವೈಯಕ್ತಿಕ ಪ್ರಶಸ್ತಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದರಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಪಟುಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವುದರಲ್ಲಿ ಮಹತ್ವದ ಕೊಡುಗೆಯನ್ನು ನೀಡಿರುತ್ತಾರೆ.

ಫಲಿತಾಂಶ:

14 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ: 

ಪ್ರಣವ್ ಎಸ್ - ಟ್ರಯಥ್ಲಾನ್-ಎ (ಪ್ರಥಮ), ಸುಭಾಷ್ - ಟ್ರಯಥ್ಲಾನ್-ಸಿ (ದ್ವಿತೀಯ), ಆದರ್ಶ್ - ಟ್ರಯಥ್ಲಾನ್- (ಪ್ರಥಮ), ಮೇಘಾ - ಟ್ರಯಥ್ಲಾನ್- ಸಿ (ಪ್ರಥಮ), ಸುಜಾತ - ಟ್ರಯಥ್ಲಾನ್-ಸಿ (ದ್ವಿತೀಯ)

16 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ: 

ಕೃಷ್ಣ - ಜಾವೆಲಿನ್ ಎಸೆತ (ಪ್ರಥಮ), ಮೈಲಾರಿ - ಜಾವೆಲಿನ್ ಎಸೆತ (ದ್ವಿತೀಯ), ನವೀನ್ - ಉದ್ದ ಜಿಗಿತ (ಪ್ರಥಮ), ಲೋಹಿತ್ ಗೌಡ- ಉದ್ದ ಜಿಗಿತ (ದ್ವಿತೀಯ), ನ್ಯಾನ್‌ದೇವ್ - 80ಮೀ ಹರ್ಡಲ್ಸ್ (ಪ್ರಥಮ), ಪ್ರೇಕ್ಷಿತಾ - ಜಾವೆಲಿನ್ ಎಸೆತ (ಪ್ರಥಮ)

18 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ: 

ಕವೀಶ್ - ಜಾವೆಲಿನ್ ಎಸೆತ (ದ್ವಿತೀಯ), ಆಕಾಶ್ - 110ಮೀ ಹರ್ಡಲ್ಸ್ (ತೃತೀಯ), ಉಲ್ಲಾಸ್ - 5ಕಿಮೀ ನಡಿಗೆ (ತೃತೀಯ), ಗುರು - ಹೆಪ್ಟತ್ಲಾನ್ (ಪ್ರಥಮ), ಉದ್ದ ಜಿಗಿತ (ದ್ವಿತೀಯ), ಮನೀಶ್ - ಉದ್ದ ಜಿಗಿತ (ತೃತೀಯ), ಭಾಗೀರಥಿ - 3ಕಿಮೀ ನಡಿಗೆ (ತೃತೀಯ), ನಾಗಿಣಿ - 1000ಮೀ (ಪ್ರಥಮ), ಚರೀಷ್ಮಾ - 1000ಮೀ (ದ್ವಿತೀಯ), ವೈಷ್ಣವಿ - ಉದ್ದ ಜಿಗಿತ (ಪ್ರಥಮ),

20 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ: 

ದಯಾನಂದ - 400ಮೀ (ದ್ವಿತೀಯ), ನೊಯಲ್ - ಉದ್ದ ಜಿಗಿತ (ಪ್ರಥಮ), ತಬಶೀರ್ - ತ್ರಿವಿಧ ಜಿಗಿತ (ಪ್ರಥಮ), ಉದ್ದ ಜಿಗಿತ (ತೃತೀಯ), ದರ್ಶನ್ - 10ಕಿಮೀ ನಡಿಗೆ (ಪ್ರಥಮ), ಸರ್ವಜಿತ್ - 100ಮೀ (ತೃತೀಯ), ಅಬ್ದುಲ್ ರಜಕ್ - ಹ್ಯಾಮರ್ ತ್ರೋ (ದ್ವಿತೀಯ), ಯಶವಂತ 800ಮೀ(ದ್ವಿತೀಯ), ರಾಮು-400ಮೀ (ತೃತೀಯ), ನಂದ - ಜಾವೆಲಿನ್ ಎಸೆತ (ದ್ವಿತೀಯ), ಶಬರಿ - 100ಮೀ ಹರ್ಡಲ್ಸ್ (ತೃತೀಯ), ಗೀತಾ - 400ಮೀ (ದ್ವಿತೀಯ), ಐಶ್ವರ್ಯ - ಚಕ್ರ ಎಸೆತ (ದ್ವಿತೀಯ), ಗುಂಡು ಎಸೆತ (ದ್ವಿತೀಯ) 23 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ಸನತ್- ಡೆಕತ್ಲಾನ್ (ಪ್ರಥಮ), ಗಣೇಶ್ - ಗುಂಡು ಎಸೆತ (ಪ್ರಥಮ), ನಾಗೇಂದ್ರ - ಚಕ್ರ ಎಸೆತ (ಪ್ರಥಮ), ರೇಖಾ - 800ಮೀ (ಪ್ರಥಮ), 400ಮೀ (ದ್ವಿತೀಯ), ಪ್ರಣಮ್ಯ - 10000ಮೀ (ಪ್ರಥಮ) 5000ಮೀ (ಪ್ರಥಮ) ಸ್ಥಾನ ಪಡೆದಿರುತ್ತಾರೆ.

ನೂತನ ಕೂಟ ದಾಖಲೆ: 

18 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ನಾಗಿಣಿ 1000 ಮೀ, ಹಾಗೂ 16 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನ್ಯಾನ್‌ದೇವ್ 80ಮೀ ಹರ್ಡಲ್ಸ್ ಹಾಗೂ 23 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನಾಗೇಂದ್ರ ಚಕ್ರ ಎಸೆತದಲ್ಲಿ ನೂತನ ಕೂಟ ದಾಖಲೆಯನ್ನು ಮಾಡಿರುತ್ತಾರೆ.

ವೈಯಕ್ತಿಕ ಪ್ರಶಸ್ತಿ: 

14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಆದರ್ಶ್ ಕ್ರೀಡಾಕೂಟದಲ್ಲಿ ಕೊಡ ಮಾಡುವ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾನೆ.  

ವಿಜೇತ ಕ್ರೀಡಾಪಟಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article