ತಾಕೊಡೆಯಲ್ಲಿ ಮಹಿಳೆಯರಿಗಾಗಿ 5 ದಿನಗಳ ಕೌಶಲ್ಯ ತರಬೇತಿ ಆರಂಭ
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಯೋತಿ ರಾಜ್ ಅವರು ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ ಮಹಿಳೆಯರು ತರಬೇತಿಯಿಂದ ಕೌಶಲ್ಯ ಕಲಿತು ಸ್ವಾವಲಂಬನೆ ಜೀವನ ಸಾಗಿಸಲು ಪ್ರಯತ್ನಿಸಬೇಕು ಬ್ಯಾಂಕ್ ಗಳು ಸ್ವ ಉದ್ಯೋಗ ಮಾಡಲು ಸಾಲ ಸೌಲಭ್ಯ ನೀಡುತ್ತಿದ್ದು ಇದರ ಪ್ರಯೋಜನ ಪಡೆಯಲು ಕರೆ ನೀಡಿದರು.
ತಾಕೊಡೆ ಚಚಿ೯ನ ಧರ್ಮ ಗುರುಗಳು ಫಾ.ರೋಹನ್ ಲೋಬೊ ಅಧ್ಯಕ್ಷತೆ ವಹಿಸಿ ಮಾತಾನಾಡಿ ಸ್ವ ಉದ್ಯೋಗ ತರಬೇತಿಯಿಂದ ಮಹಿಳೆಯರು ಉತ್ತಮ ಜೀವನ ನಡೆಸಲು ಸಾಧ್ಯವಿದೆ, ಇಂಥ ತರಬೇತಿ ಗಳಿಗೆ ನಮ್ಮ ಸದಾ ಬೆಂಬಲ ವಿದೆ ಎಂದು ತಿಳಿಸಿ ತರಬೇತಿ ಪಡೆಯುತ್ತಿರುವ ಮಹಿಳೆಯರಿಗೆ ಶುಭ ಹಾರೈಸಿದರು.
ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ ಮಾತನಾಡಿ ಮಹಿಳೆಯರು ಸ್ವ ಉದ್ಯೋಗ ತರಬೇತಿಯ ಪ್ರಯೋಜನ ಪಡೆದು ಸಣ್ಣ ಸಣ್ಣ ಉದ್ದಿಮೆ ಆರಂಭ ಮಾಡಿ ಉಳಿತಾಯ ಮಾಡಿ ಯಶಸ್ಸು ಗಳಿಸಬೇಕೆಂದು ಸಲಹೆ ನೀಡಿದರು.
ಚರ್ಚ್ ಪಾಲನ ಮಂಡಳಿ ಕಾರ್ಯದರ್ಶಿ ಆಲ್ವಿನ್ ಪಿಂಟೋ, ಆಯೋಗ ಸಂಯೋಜಕ ಪಾವ್ಲ್ ಡಿಸೋಜಾ, ಬೆಥೆನಿ ಕಾನ್ವೆಂಟ್ ಸುಪೇರಿಯರ್ ಸಿಸ್ಟೆರ್ ರೀನಾ, ತರಬೇತುದಾರರಾದ ಶುಭ ಲಕ್ಷ್ಮೀ ಮೂಡುಬಿದಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ತ್ರೀ ಸಂಘಟನೆ ಅಧ್ಯಕ್ಷೆ ಐ.ವಿ ಕ್ರಾಸ್ತ ಸ್ವಾಗತಿಸಿದರು. ಲೀಜಾ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ಶೆರಿ ನಜ್ರೆತ್ ವಂದಿಸಿದರು. 30 ಜನ ಮಹಿಳೆಯರು 5 ದಿನದ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.