
ಕಳಕೊಂಡ ಚಿನ್ನವನ್ನು 65 ಗಂಟೆಯಲ್ಲಿ ಪತ್ತೆ ಮಾಡಿದ ಮೂಡುಬಿದಿರೆ ಪೊಲೀಸರು: ಹಸ್ತಾಂತರ
Tuesday, August 12, 2025
ಮೂಡುಬಿದಿರೆ: ಆ.8 ರಂದು ಮಹಿಳೆಯೋವ೯ರು ಪಸ್ ೯ ಸಹಿತ 72 ಗ್ರಾಂ ಚಿನ್ನವನ್ನು ಕಳೆದುಕೊಂಡಿದ್ದು ಅದನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ. ನೇತೃತ್ವದ ತಂಡವು 65 ಗಂಟೆಯಲ್ಲಿ ಪತ್ತೆ ಹಚ್ಚಿ ಸಂಬಂಧಪಟ್ಟವರಿಗೆ ಸೋಮವಾರ ಹಸ್ತಾಂತರಿಸಿ ಮೆಚ್ಚುಗೆಗೆ ಪಾತ್ರವಾಗಿದೆ.
ಪಡುಮಾನಾ೯ಡಿನ ದಿ. ಧಮ೯ಪಾಲ ಬಲ್ಲಾಳ್ ಅವರ ಪತ್ನಿ ವಿಜಯ ಅವರು ಆ. 8ರಂದು ಕುಪ್ಪೆಪದವಿನಲ್ಲಿ ಅವರ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಹಿಂತಿರುಗುವ ಸಂದಭ೯ ಮಧ್ಯಾಹ್ನ 2 ಗಂಟೆ ವೇಳೆಗೆ ಪಸ್ ೯ ಸಹಿತ ಎರಡು ಬಳೆ ಮತ್ತು ಚಿನ್ನದ ಸರ ಒಟ್ಟು 9 ಪವನ್ ಚಿನ್ನವನ್ನು ಕಳೆದುಕೊಂಡಿದ್ದರು.
ಈ ಬಗ್ಗೆ ಅದೇ ದಿನ ರಾತ್ರಿ ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಕಾಯ೯ಪ್ರವೃತ್ತರಾದ ಪೊಲೀಸರು ಠಾಣಾಧಿಕಾರಿ ಸಂದೇಶ್ ಪಿ. ಜಿ ಅವರ ನಿದೇ೯ಶನದಲ್ಲಿ ಚಿನ್ನ ಸಿಕ್ಕಿರುವವರನ್ನು ಪತ್ತೆ ಹಚ್ಚಿ ಚಿನ್ನವನ್ನು ವಶ ಪಡಿಸಿಕೊಂಡು ಸೋಮವಾರ ವಾರೀಸುದಾರರಿಗೆ ಹಸ್ತಾಂತರಿಸಿದ್ದಾರೆ.
ಅಪರಾಧ ಪತ್ತೆದಳದ ಮಹಮ್ಮದ್ ಹುಸೇನ್, ಇಕ್ಬಾಲ್, ಅಖಿಲ್ ಮತ್ತು ನಾಗರಾಜ್ ಅವರು ಪತ್ತೆ ಕಾಯ೯ದಲ್ಲಿ ಇದ್ದರು.