ಕಾಳಿಕಾಂಬಾ ಮಹಿಳಾ ಸಮಿತಿಯ `ಶ್ರಾವಣ ಸಂಧ್ಯಾ': ಮಹಿಳೆಯರಿಗೆ ಆರೋಗ್ಯ ಮಾಹಿತಿ

ಕಾಳಿಕಾಂಬಾ ಮಹಿಳಾ ಸಮಿತಿಯ `ಶ್ರಾವಣ ಸಂಧ್ಯಾ': ಮಹಿಳೆಯರಿಗೆ ಆರೋಗ್ಯ ಮಾಹಿತಿ


ಮೂಡುಬಿದಿರೆ: ಮಹಿಳೆಯರು ತಮ್ಮ ದೈನಂದಿನ ಒತ್ತಡದಿಂದ ಆರೋಗ್ಯದ ಕುರಿತಾದ ನಿರ್ಲಕ್ಷ್ಯ, ವ್ಯಾಯಾಮ ಮಾಡದಿರುವುದು ಸರಿಯಲ್ಲ  ಎಂದು ಆಳ್ವಾಸ್ ಹೆಲ್ತ್ ಸೆಂಟರ್‌ನ ಡಾ. ಸದಾನಂದ ನಾಯ್ಕ್  ಹೇಳಿದರು.


ಅವರು ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ  ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಶನಿವಾರ  ಏರ್ಪಡಿಸಿದ್ದ  ಶ್ರಾವಣ ಸಂಧ್ಯಾ ಕಾರ್ಯಕ್ರಮದಲ್ಲಿ  ಮಹಿಳೆಯರಿಗೆ  ಆರೋಗ್ಯ ಮಾಹಿತಿ ನೀಡಿದ ಅವರು ಮನೆಯಲ್ಲಿ ಗಂಡಸರು ಅಸೌಖ್ಯದಿಂದ ಇದ್ದರೆ ಹೆಂಗಸರು ಅತಿ ಕಾಳಜಿಯಿಂದ ವೈದ್ಯರ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ, ಒಂದೊಮ್ಮೆ ದ್ವಿಗುಣರೂಪದಲ್ಲಿ ಪರಿಪಾಲಿಸುವುದನ್ನು ಕಾಣಬಹುದು, ಆದರೆ ಹೆಂಗಸರು ಖಾಯಿಲೆ ಬಿದ್ದರೆ ಗಂಡಸರು ಬಹಳ ಕಷ್ಟ ಪಡುವಂತಾಗುತ್ತದೆ ಆದ್ದರಿಂದ ಮಹಿಳೆಯರು ತಮ್ಮ ಆರೋಗ್ಯದ ಕಡೆ ಗಮನ ನೀಡಬೇಕೆಂದರು.


ರಕ್ತದ ಒತ್ತಡ,ಡಯಾಬಿಟಿಸ್, ಹೃದ್ರೋಗ ತೊಂದರೆ ಯ ಬಗ್ಗೆ ತಿಳಿಸಿದರು ಆರೋಗ್ಯ ವಿಮೆಯ ಬಗ್ಗೆ  ಅವರು ಜಾಗೃತಿ ಮೂಡಿಸಿದರು ಹಾಗೂ ಬಳಿಕ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.


ಆಡಳಿತ ಮೊಕ್ತೇಸರ ಎಂ.ಕೆ. ಬಾಲಕೃಷ್ಣ ಆಚಾರ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಅತಿಥಿಗಳಾಗಿ ಮೊಕ್ತೇಸರರಾದ ಉಳಿಯ ಶಿವರಾಮ ಆಚಾರ್ಯ, ಯೋಗೀಶ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ್ ಆಚಾರ್ಯ ಉಪಸ್ಥಿತರಿದ್ದರು.  

ದತ್ತಿನಿಧಿ ಹಾಗೂ ದಾನಿಗಳ ನೆರವಿನಿಂದ  ಎಸ್ ಎಸ್‌ಎಲ್‌ಸಿ ಹಾಗೂ ಪಿಯುಸಿ ಪಾಸಾದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಸಮಿತಿ ಅಧ್ಯಕ್ಷೆ  ಶಾಂತಲಾ ಸೀತಾರಾಮ ಆಚಾಯ೯ ಸ್ವಾಗತಿಸಿದರು. ಕೋಶಾಧಿಕಾರಿ ವಿದ್ಯಾಶ್ರೀ ಸುರೇಶ್ ವಂದಿಸಿದರು. ಕಾರ್ಯದರ್ಶಿ ರಶ್ಮಿತಾ ಅರವಿಂದ್ ನಿರೂಪಿಸಿದರು.

ಶ್ರಾವಣ ಮಾಸದ ವಿಶೇಷ ತಿಂಡಿ ತಿನಿಸು (ಮೂಡೆ, ಕೊಟ್ಟಿಗೆ, ತೊವ್ವೆ, ಚಗ್ತೆ ಸೊಪ್ಪಿನ ಅಂಬಡೆ, ಪತ್ರೊಡೆ, ಸಾರ್ಣಡ್ಡೆ, ಕಷಾಯ )ಗಳ ಸತ್ಕಾರ ಏರ್ಪಡಿಸಲಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article