
ಸಪಳಿಗರ ಸಂಘದಿಂದ ಆಟಿಡ್ ಕೆರ‍್ಡೊಂಜಿ ದಿನ
ಕಳೆದ 40 ವರ್ಷಗಳಿಂದ ನಮ್ಮ ಸಂಘವು ಸಕ್ರಿಯವಾಗಿ ಸಮುದಾಯವನ್ನು ಸಂಘಟಿಸುವ ಕೆಲಸವನ್ನು ಮಾಡುತ್ತಿದೆ. ಒಂದೇ ಕುಟುಂಬದವರಂತೆ ಬೆರೆಯುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. ಸಮುದಾಯ, ಸಂಘಟನೆ ಬಲಗೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.
ಶ್ರೀಕ್ಷೇತ್ರ ಕಾಂತಾವರದ ಧರ್ಮದರ್ಶಿ ಡಾ.ಜೀವಂಧರ್ ಬಲ್ಲಾಳ್ ಬಾರಾಡಿಬೀಡು ಕಾರ್ಯಕ್ರಮ ಉದ್ಘಾಟಿಸಿದರು.
ಸಿಎಯಲ್ಲಿ ಸಾಧನೆ ಮಾಡಿದ ಸ್ನೇಹಲ್ ಮಾರ್ನಾಡ್ ಅವರನ್ನು ಸನ್ಮಾನಿಸಲಾಯಿತು. ರಸಪ್ರಶ್ನೆ ಸ್ಪರ್ಧಿಗಳನ್ನು ಪುರಸ್ಕರಿಸಲಾಯಿತು. ಮಕ್ಕಳಿಗೆ ಸಸಿ ವಿತರಿಸಲಾಯಿತು.
ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲು, ನಿವೃತ್ತ ಶಿಕ್ಷಕ ಧರ್ಮರಾಜ ಕೆ.ಕಂಬಳಿ, ಕಾಂತಾವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಕೋಟ್ಯಾನ್, ಪ್ರಮುಖರಾದ ಜಯೇಶ್ ಬಲ್ಲಾಳ್, ಸಂಜಯ ಬಲ್ಲಾಳ್, ನಿಹಾಲ್ ಜೆ.ಬಲ್ಲಾಳ್ ಅತಿಥಿಗಳಾಗಿದ್ದರು.
ಸಂಘದ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಜಯ ಬಂಗೇರ, ಯುವ ವೇದಿಕೆಯ ಅಧ್ಯಕ್ಷ ಸುಕೇಶ್ ಬಾರಾಡಿ, ಮಕ್ಕಳ ವೇದಿಕೆಯ ಅಧ್ಯಕ್ಷ ರಾಜ್ ಬಂಗೇರ ಉಪಸ್ಥಿತರಿದ್ದರು.
ರೂಪಾ ಪ್ರದೀಪ್ ಹಾಗೂ ಜಗನ್ನಾಥ ಸಪಳಿಗ ನಿರೂಪಿಸಿದರು. ಪ್ರತಾಪ್ ಬೆಟ್ಕೇರಿ ವಂದಿಸಿದರು.
ತುಳುನಾಡಿನ ಖಾದ್ಯಗಳನ್ನು ತಯಾರಿಸಿದವರಿಗೆ ದಿ. ಸುಶೀಲ ಸಾಧು ಪುತ್ರನ್ ಸ್ಮರಣಾರ್ಥ ಬಹುಮಾನ ನೀಡಲಾಯಿತು. ಕ್ರೀಡಾಕೂಟ ಸ್ಪರ್ಧಿಗಳಿಗೆ ದಿ.ರಾಜು ಪುತ್ರನ್ ಸ್ಮರಾಣಾರ್ಥ ಯೋಗಿನಿ ಪುತ್ರನ್ ಬಹುಮಾನವನ್ನು ನೀಡಿದರು.