ವಿಶ್ವ ಸ್ತನ್ಯಪಾನ ಸಪ್ತಾಹ: ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮಾಹಿತಿ
Wednesday, August 6, 2025
ಮೂಡುಬಿದಿರೆ: ವಿಶ್ವ ಸ್ತನ್ಯಪಾನ ಸಪ್ತಾಹದಂಗವಾಗಿ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್, ಆಳ್ವಾಸ್ ಆಯುವೇ೯ದ ವೈದ್ಯಕೀಯ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ ಇವುಗಳ ಜಂಟಿ ಸಹಯೋಗದಲ್ಲಿ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮಾಹಿತಿ ಕಾಯ೯ಕ್ರಮ ಮಂಗಳವಾರ ನಡೆಯಿತು.
ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ನ ಅಧ್ಯಕ್ಷ ಹರೀಶ್ ಎಂ.ಕೆ. ಕಾಯ೯ಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಆಳ್ವಾಸ್ ಆಯುವೇ೯ದ ವೈದ್ಯಕೀಯ ಆಸ್ಪತ್ರೆಯ ಡಾ. ಶೃತಿ ಶಮಾ೯ ಮತ್ತು ಡಾ. ಶ್ರೀ ಅಂಜಲಿ ಅವರು ಸ್ತನ್ಯಪಾನದ ಮಹತ್ವದ ಕುರಿತು ಮಾಹಿತಿ ನೀಡಿದರು.
ರೋಟರಿ ಕ್ಲಬ್ ನ ಕಾಯ೯ದಶಿ೯ ಭರತ್ ಶೆಟ್ಟಿ, ಮಾಜಿ ಅಧ್ಯಕ್ಷ ಪೂಣ೯ಚಂದ್ರ ಜೈನ್, ಅಂಗನವಾಡಿ ಕಾಯ೯ಕತೆ೯ ಜಯಂತಿ ಸಹಾಯಕಿ ಅಕ್ಷತಾ, ಸ್ತ್ರೀ ಶಕ್ತಿ ಸಂಘದ ಸದಸ್ಯೆ ರವಿಕಲಾ ಉಪಸ್ಥಿತರಿದ್ದರು. ಮತ್ತಿತರರು ಉಪಸ್ಥಿತರಿದ್ದರು.

