ಬಿಜೆಪಿ ಮುಲ್ಕಿ ಮೂಡುಬಿದಿರೆ ಮಂಡಲ: ಹಳೆಯಂಗಡಿ ಮಹಾಶಕ್ತಿ ಕೇಂದ್ರದ ಅಭ್ಯಾಸ ವಗ೯
Monday, August 18, 2025
ಮೂಡುಬಿದಿರೆ: ಹಳೆಯಂಗಡಿ ಗ್ರಾಮ ಪಂಚಾಯತ್ ನ ಹಳೆಯಂಗಡಿ, ಪಾವಂಜೆ, ಸಸಿಹಿತ್ಲು ಶಕ್ತಿ ಕೇಂದ್ರದ ಅಭ್ಯಾಸ ವರ್ಗವು ಸೋಮವಾರ ಹಳೆಯಂಗಡಿ ಜಾರಂದಾಯ ದೈವಸ್ಥಾನದಲ್ಲಿ ನಡೆಯಿತು.
ಮುಲ್ಕಿ ಮೂಡುಬಿದಿರೆ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್ ಬಳ್ಕುಂಜೆ ಅವರು ಅಧ್ಯಕ್ಷತೆ ವಹಿಸಿ ಕಾಯ೯ಕ್ರಮವನ್ನು ಉದ್ಘಾಟಿಸಿದರು.
ಮಂಡಲದ ಅಭ್ಯಾಸ ವರ್ಗದ ಸಹಸಂಚಾಲಕ ಜಯಾನಂದ ಮುಲ್ಕಿ, ಹಳೆಯಂಗಡಿ ಮಹಾಶಕ್ತಿಕೆಂದ್ರದ ಅಧ್ಯಕ್ಷ ಲಕ್ಷ್ಮಣ್ ಸಾಲ್ಯಾನ್ ,ಮಹಿಳಾ ಪ್ರಮುಖರಾದ ಭಾರತಿ ಶೆಟ್ಟಿಗಾರ್, ಸತೀಶ್ ಭಟ್ ಕೊಳುವೈಲು , ಹಿರಿಯರಾದ ಸದಾಶಿವ ಅಂಚನ್ ಚಿಲಿಂಬಿ ಅವರು ಭಾರತ ಮಾತೆಗೆ, ಶ್ಯಾಮ್ ಪ್ರಸಾದ್ ಮುಖರ್ಜಿ ಹಾಗೂ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಯನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಮೊದಲನೆಯ ಅವಧಿ ಸುನಿಲ್ ಆಳ್ವ, ಎರಡನೆಯ ಅವಧಿ ಲೋಕೇಶ್ ಬಜಪೆ , ಮೂರನೇ ಅವಧಿ ಗಣೇಶ್ ಅರ್ಬಿ ಹಾಗೂ 4ನೇ ಅವಧಿಯನ್ನು ಜಯಂತ್ ಸಾಲ್ಯಾನ್ ನಡೆಸಿಕೊಟ್ಟರು.
ಶಾಂತಿಪ್ರಸಾದ್ ಹೆಗ್ಡೆ ಅವರ ಸಮಾರೋಪದೊಂದಿಗೆ ಅಭ್ಯಾಸ ವರ್ಗವು ಕೊನೆಗೊಂಡಿತು.
ಹಳೆಯಂಗಡಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಜೀವನ್ ಶೆಟ್ಟಿ ಅಂಗರಗುಡ್ಡೆ, ಶಕ್ತಿಕೇಂದ್ರದ ಪ್ರಮುಖರು, ಬೂತ್ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಸದಸ್ಯರುಗಳು, ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಭಾಗವಹಿಸಿದ್ದರು.
