ಆರಂಬೋಡಿ ಗುರು ಚೈತನ್ಯ ಅನಾಥಾಶ್ರಮಕ್ಕೆ ಮಹಾವೀರ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಭೇಟಿ
ಸುಮಾರು ಮಧ್ಯಾಹ್ನದವರೆಗೆ ಅವರ ಜೊತೆ ಬೆರೆತು ಅವರಿಗೆ ಸಿಹಿತಿಂಡಿ ಹಾಗೂ ದಿನನಿತ್ಯ ಬಳಕೆಯ ವಸ್ತುಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಹೊಸಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಹೆತ್ತವರನ್ನು ಅನಾಥರನ್ನಾಗಿ ಮಾಡಬಾರದು. ತಂದೆ ತಾಯಿ ಅಷ್ಟೇ ಅಲ್ಲ ಮನೆಯಲ್ಲಿರುವ ಯಾವುದೇ ವ್ಯಕ್ತಿಗಳನ್ನು ನಿರ್ಗತಿಕರಾಗಿ ಮಾಡಬಾರದು ಎಂಬ ಸಂದೇಶವನ್ನು ನೀಡಿದರು. ಹಾಗೆಯೇ ಸಮಾಜದಲ್ಲಿ ಇರುವ ಯಾವುದೇ ವ್ಯಕ್ತಿ ನಿರ್ಗತಿಕರಾಗಬಾರದು. ಇಂತಹ ನಿರ್ಗತಿಕರು ಕಂಡುಬಂದರೆ ಎನ್.ಎಸ್.ಎಸ್. ವಿದ್ಯಾರ್ಥಿಗಳು ಅವರವರ ಮನೆಗೆ ಸೇರಿಸುವ ಕೆಲಸವನ್ನು ಕೈಗೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂಬುದಾಗಿ ತಿಳಿಸಿದರು.
ಅನಾಥಶ್ರಮವನ್ನು ನಡೆಸುತ್ತಿರುವ ಹೊನ್ನಯ್ಯ ಇವರು ಮಾತನಾಡಿ ವಿದ್ಯಾರ್ಥಿಗಳಿಗೆ ಅಲ್ಲಿರುವ ವ್ಯಕ್ತಿಗಳ ಮಾಹಿತಿ ನೀಡಿದರು.
ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಶಾರದ ವಂದಿಸಿದರು. ಎನ್‌ಎಸ್‌ಎಸ್. ವಿದ್ಯಾರ್ಥಿ ನಾಯಕರಾದ ವನಿತಾ, ಕೀರ್ತನ್, ಸಂಜು ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಭಾಗವಹಿಸಿದರು.
ಈ ಕಾರ್ಯಕ್ರಮಕ್ಕೆ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಸಹಕರಿಸಿದರು.