
ಮೂಡುಬಿದಿರೆ ತುಳು ಕೂಟದಿಂದ "ಆಟಿಡೊಂಜಿ ದಿನ"
Monday, August 11, 2025
ಮೂಡುಬಿದಿರೆ: ತುಳುಕೂಟ (ರಿ.) ಬೆದ್ರ ಇದರ ಆಶ್ರಯದಲ್ಲಿ ತುಳುವರ ಬದುಕಿನ ವಿಶೇಷತೆಯನ್ನು ತಿಳಿಸುವ ವಿಶೇಷ ಕಾಯ೯ಕ್ರಮ "ಆಟಿಡೊಂಜಿ ದಿನ" ಕಾಯ೯ಕ್ರಮವು ಮೂಡುಬಿದಿರೆಯ ಸ್ಕೌಟ್ ಮತ್ತು ಗೈಡ್ಸ್ ಕನ್ನಡ ಭವನ ನಡೆಯಿತು.
ನಿವೃತ್ತ ಶಿಕ್ಷಕ ಮುನಿರಾಜ ರೆಂಜಾಳ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ತುಳುವರ ಆಟಿ ತಿಂಗಳ ಹಿಂದಿನ ಜೀವನಶೈಲಿಯನ್ನು ಹಾಗೂ ಆಧುನಿಕ ಜೀವನ ಶೈಲಿಯ ಜನರಿಗೆ ಮರು ನೆನಪಿಸುವ ವಿಶೇಷ ಕಾಯ೯ಕ್ರಮ ಇದಾಗಿದೆ. ಆಟಿಡೊಂಜಿ ದಿನ ಎಂಬ ಹೆಸರಿನಿಂದ ತುಳು ನಾಡಿನಲ್ಲಿ ನೆಲೆಸಿರುವ ತುಳು ಬಾಷಿಗರು ಹಾಗೂ ರಾಜ್ಯ, ರಾಷ್ಟ್ರ, ವಿಶ್ವದಾದ್ಯಂತ ನೆಲೆಸಿರುವ ತುಳುವರು ಬಹು ಶ್ರದ್ಧೆಯಿಂದ ಆಚರಿಸುತ್ತಿದ್ದು, ತುಳುವ ಜೀವನ ಶೈಲಿ, ತುಳುವರ ಪ್ರಾಚೀನ ಆಹಾರ ಪದ್ಧತಿ, ಸಾಂಸ್ಕೃತಿಕ ಪ್ರಭುದ್ದತೆ, ಶ್ರೀಮಂತ ತುಳುವ ಭಾಷೆಯ ಅನಾವರಣವಾಗಿದೆ ಎಂದರು.
ತುಳುಕೂಟದ ಅಧ್ಯಕ್ಷ ಧನಕೀತಿ೯ ಬಲಿಪ ಅಧ್ಯಕ್ಷತೆ ವಹಿಸಿದ್ದರು.
ತುಳು ಕೂಟ ಬೆದ್ರ ಸ್ಥಾಪಕ ಅಧ್ಯಕ್ಷ ಚಂದ್ರಹಾಸ ದೇವಾಡಿಗ, ಕೋಶಾಧಿಕಾರಿ ಸುಭಾಶ್ಚಂದ್ರ ಚೌಟ, ಕಾಯ೯ದಶಿ೯ ವೇಣುಗೋಪಾಲ ಶೆಟ್ಟಿ, ಚೇತನ ಆರ್ ಹಗ್ಡೆ, ಪದ್ಮಶ್ರೀ ಭಟ್, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಸಾಹಿತಿ ಜಯಂತಿ ಬಂಗೇರ, ಸದಾನಂದ ನಾರಾವಿ, ತುಳುನಾಡು ವಾತೆ೯ಯ ಪುನೀತ್ ಮತ್ತಿತರರು ಈ ಸಂದಭ೯ದಲ್ಲಿದ್ದರು.
ತುಳು ಪದರಂಗಿತ, ನೃತ್ಯ ಜಾನಪದ ಮನೋರಂಜನಾ ಕಾಯ೯ಕ್ರಮ ಹಾಗೂ ವಾಯ್ಸ್ ಆಫ್ ಆರಾಧನಾ ತಂಡದಿಂದ ವಿಶೇಷ ಸಾಂಸ್ಕೃತಿಕ ಕಾಯ೯ಕ್ರಮಗಳು ಪ್ರಸ್ತುತಗೊಂಡಿತು. ನಂತರ ಆಟಿಯ ಭಕ್ಷ್ಯ-ಭೋಜನವನ್ನು ಸವಿಯಲಾಯಿತು.