ಸಾಹಿತಿ, ವಿಮರ್ಶಕಿ 'ಧಾರಿಣಿ ದೇವಿ' ಎಸ್.ಪಿ. ಶಾಂತಮ್ಮ ನಿಧನ

ಸಾಹಿತಿ, ವಿಮರ್ಶಕಿ 'ಧಾರಿಣಿ ದೇವಿ' ಎಸ್.ಪಿ. ಶಾಂತಮ್ಮ ನಿಧನ


ಮೂಡುಬಿದಿರೆ: ಜೈನ ಪುರಾಣಗಳನ್ನು ಆಧರಿಸಿ ಕಾದಂಬರಿ ಸ್ವರೂಪದಲ್ಲಿ ರಚಿಸಿದವರಲ್ಲಿ ಪ್ರಥಮರೆನಿಸಿದ ಧಾರಿಣಿ ದೇವಿ' ಕಾವ್ಯನಾಮಾಂಕಿತ ಸಾಹಿತಿ, ವಿಮರ್ಶಕಿ, ದಿವಂಗತ ಎಸ್.ಜೆ. ಪ್ರಭಾಚಂದ್ರ ಅವರ ಪತ್ನಿ ಎಸ್.ಪಿ. ಶಾಂತಮ್ಮ (95) ಅವರು ಗುರುವಾರ (ಆ.7) ಬೆಂಗಳೂರಿನಲ್ಲಿರುವ ತಮ್ಮ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದರು.

ಮೂಡುಬಿದಿರೆ ಶ್ರೀ ಧವಲಾ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾಗಿದ್ದ ವಿಶ್ರಾಂತ ಪ್ರಾಧ್ಯಾಪಕ ಎಸ್.ಪಿ. ಅಜಿತ್ ಪ್ರಸಾದ್ ಸಹಿತ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅವರು ಆಗಲಿದ್ದಾರೆ.

ಮೂಲತಃ ಶಿವಮೊಗ್ಗ ಜಿಲೆಯ ಹೊಸನಗರದವರಾದ ಶಾಂತಮ್ಮ ಅವರು ಅಂಜನಾ, ಚಂದನಾ, ಭವದತ್ತಾ, ಭಗವಾನ್ ಮಹಾವೀರ ಮುಂತಾದ ಕಾದಂಬರಿಗಳು, 'ಬೆಳ್ಳಿ ಬೆಟ್ಟದಂಗಳಿದಲ್ಲಿ ಮುಂತಾದ ಪ್ರವಾಸ ಕೃತಿಗಳು, 'ಅಣ್ಣನ ಹಾಡುಗಳು' (ಮಹಾಕವಿ ಗತ್ನಾಕರನ ಸುಮಾರು 330 ಹಾಡುಗಳಿಗೆ ವಿಮರ್ಶೆ) ಸಹಿತ 4 ಕೃತಿಗಳನ್ನು ಅವರು ಗಳಿಸಿದ್ದಾರೆ. ಶ್ರೀ ಗೊಮ್ಮಟೇಶ್ವರ ಪ್ರಶಸ್ತಿ ಸ್ವೀಕರಿಸಿದ ಮೊದಲಿಗರಾದ ಶಾಂತಮ್ಮ ಅವರು ಇತರ ಹತಾರು ಪ್ರಶಸಿಗಳನ್ನು ಪಡೆದಿದ್ದಾರೆ

ನಾಡಿನಾದ್ಯಂತ ಉಪನ್ಯಾಸಗಳನ್ನು ನೀಡಿರುವ ಇವರು ನಾಲ್ಕು ಬಾರಿ ಅಮೇರಿಕಾ ಪ್ರವಾಸಗೈದವರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article