
ಜವನೆರ್ ಬೆದ್ರದಿಂದ ಅಷ್ಟಮಿದ ಗೊಬ್ಬು
Monday, August 11, 2025
ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್ (ರಿ) ವತಿಯಿಂದ ತಾಲೂಕು ಆಡಳಿತ ಸೌಧದ ಮುಂಭಾಗ ಅಷ್ಟಮಿಯ ಗೊಬ್ಬು ಎನ್ನುವ ಅಷ್ಟಮಿಯ ಸಾಂಪ್ರದಾಯಿಕ ಕ್ರೀಡಾಕೂಟ ನಡೆಯಿತು,
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಅವರು ಭಾಗವಹಿಸಿ ಮಾತನಾಡಿ ಜವನೆರ್ ಬೆದ್ರ ಸಂಘಟನೆ ಮೂಡುಬಿದಿರೆಯ ಮಾದರಿ ಸಂಘಟನೆ , ಸ್ವಚ್ಛತೆ ಪರಿಸರ ಪ್ರೇಮ, ರಕ್ತದಾನದಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಶ್ಲಾಘಿಸಿದರು.
ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ್ ಎಂ , ಕುಮಾರ್ ಎಲೆಕ್ಟ್ರಿಕಲ್ಸ್ ನ ಕುಮಾರ್ ಪೂಜಾರಿ, ಮಾಡರ್ನ್ ಕನ್ಸ್ಟ್ರಕ್ಷನ್ ಮಾಲಕ ಜಾವೇದ್ ಶೇಕ್, ಉದ್ಯಮಿ ಗಂಗಾಧರ್ ಶೆಟ್ಟಿ, ರವಿ ಪೂಜಾರಿ, ಮುರುಳಿಧರ್ ಕೋಟ್ಯಾನ್, ಪ್ರೊಫೆಸರ್ ಡಾ| ಶ್ಯಾಮ್ ಪ್ರಸಾದ್ , ರಾಜೇಶ್ ಕೋಟೆಕಾರ್ , ನಿವೃತ ಶಿಕ್ಷಕಿ ಪ್ರೇಮ ರಾವ್ ಅತಿಥಿಗಳಾಗಿ ಭಾಗವಹಿಸಿದರು.
ರಾಷ್ಟ್ರಮಟ್ಟದ ಕಬಡ್ಡಿ ತೀರ್ಪುಗಾರರಾಗಿ ಆಯ್ಕೆಯಾದ ಸಂಘಟನೆಯ ಕ್ರೀಡಾ ಕಾರ್ಯದರ್ಶಿ ಭಾಸ್ಕರ್ ಪಾಲಡ್ಕ ಅವರನ್ನು ಗೌರವಿಸಲಾಯಿತು. ಅಷ್ಟಮಿಯ ಸಾಂಪ್ರದಾಯಿಕ ಕ್ರೀಡೆಗಳಾದ ತಪ್ಪಂಗೈ, ಲಗೋರಿ, ಹಗ್ಗ ಜಗ್ಗಾಟ, ಮಡಿಕೆ ಹೊಡೆಯುವುದು ಮತ್ತು ಮಾನವ ಗೋಪುರ ಮುಂತಾದ ಕ್ರೀಡೆಗಳು ಮಕ್ಕಳಿಗೆ ಮಹಿಳೆಯರಿಗೆ ಹಾಗೂ ಪುರುಷರಿಗಾಗಿ ನಡೆಯಿತು,
ಸಂಘಟನೆಯ ಸ್ಥಾಪಕ ಅಧ್ಯಕ್ಷ ಅಮರ್ ಕೋಟೆ, ಕಾರ್ಯದರ್ಶಿ ದಿನೇಶ್ ಕುಮಾರ್ ,ಯುವ ಸಂಘಟನೆಯ ಸಂಚಾಲಕರಾದ ನಾರಾಯಣ ಪದುಮಲೆ, ಟ್ರಸ್ಟಿ ರಂಜಿತ್ ಶೆಟ್ಟಿ , ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹನಾ ನಾಯಕ್ , ರಕ್ತ ನಿಧಿ ಸಂಚಾಲಕ ಮನು ಒಂಟಿ ಕಟ್ಟೆ, ಭಕುತಿ ಸಂಚಾಲಕ ಪ್ರಥಮ್ ಹಾಗೂ ಸಂಘಟನೆಯ ಸದಸ್ಯರು ಭಾಗವಹಿಸಿದರು
ಸಂದೀಪ್ ಕೆಲಪುತ್ತಿಗೆ ಹಾಗೂ ಗುರುಪ್ರಸಾದ್ ಬಿ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು.