
ಕ್ರೈಸ್ತ ಧಮ೯ಗುರುಗಳು, ಭಗಿನಿಯರ ಮೇಲೆ ದೌಜ೯ನ್ಯ ಖಂಡಿಸಿ ಆಲಂಗಾರಿನಲ್ಲಿ ಮೌನ ಪ್ರತಿಭಟನೆ
Sunday, August 10, 2025
ಮೂಡುಬಿದಿರೆ: ಒರಿಸ್ಸಾ ರಾಜ್ಯದಲ್ಲಿ ಹಾಗೂ ದೇಶದ ವಿವಿದೆಡೆಯಲ್ಲಿ ಕ್ರೈಸ್ತ ಸಮಾಜವನ್ನು ಗುರಿಯಾಗಿಸಿ ಕ್ರೈಸ್ತ ಧರ್ಮಗುರುಗಳ ಮೇಲೆ ಹಾಗೂ ಕ್ರೈಸ್ತ ಧರ್ಮ ಭಗಿನಿಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು ಸುಳ್ಳು ಆರೋಪಗಳ ಮೇಲೆ ಪ್ರಕರಣಗಳು ಕೂಡಾ ದಾಖಲಾಗುತ್ತಿವೆ ಇಲ್ಲವನ್ನು ಖಂಡಿಸಿ ಇಂದು ಕಥೋಲಿಕ್ ಸಭಾ ( ರಿ ) ಸಂಘಟನೆಯ ನೇತೃತ್ವದಲ್ಲಿ ಮೂಡುಬಿದಿರೆ ವಲಯದ ಅಲಂಗಾರು ಸೇರಿ ಹಲವೆಡೆ ಏಕಕಾಲದಲ್ಲಿ ಕ್ರೈಸ್ತ ಸಮಾಜದ ಬಂಧುಗಳು , ಕ್ರೈಸ್ತ ಧರ್ಮಗುರುಗಳು, ಕ್ರೈಸ್ತ ಧರ್ಮ ಭಗೀನಿಯರು ಭಾನುವಾರ ಮೌನ ಪ್ರತಿಭಟನೆ ನಡೆಸಿದರು.
ಅಲಂಗಾರಿನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ರೇ. ಪಾ ರಾಬರ್ಟ್ ಕ್ರಾಸ್ತಾ , ಮೌಂಟ್ ರೋಸರಿ ಸುಪೀರಿಯರ್ ಸಿಸ್ಟರ್ ಸುನೀತಾ , ಅಲಂಗಾರು ಇಗರ್ಜಿಯ ಸರ್ವ ಅಯೋಗಗಳ ಸಂಚಾಲಕ ರಾಜೇಶ್ ಕಡಲಕೆರೆ , ಉಪಾಧ್ಯಕ್ಷ ಶ್ರೀ ಎಡ್ವಾರ್ಡ್ ಸೇರಾವೊ , ಕಾರ್ಯದರ್ಶಿ ಲಾರೆನ್ಸ್ , ಕ್ಯಾ.ಸಭಾ ಅಲಂಗಾರಿನ ಅಧ್ಯಕ್ಷೆ ಮೇಬಲ್ ಹಾಗೂ ಇನ್ನಿತರ ಮುಖಂಡರು ಭಾಗವಹಿಸಿದ್ದರು.