
ಮೂಡುಬಿದಿರೆ: 34ನೇ ವಷ೯ದ ಮುದ್ದುಕೃಷ್ಣ ಸ್ಪಧೆ೯ಗೆ ಚಾಲನೆ
Sunday, August 10, 2025
ಮೂಡುಬಿದಿರೆ: ಶ್ರೀ ಕೃಷ್ಣ ಫ್ರೆಂಡ್ಸ್ ಸಕ೯ಲ್ ವತಿಯಿಂದ ನಡೆದ 34ನೇ ವಷ೯ದ ಮುದ್ದುಕೃಷ್ಣ ಸ್ಪಧೆ೯ಯನ್ನು ಬಿಜೆಪಿ ದ.ಕ. ನಿಕಟಪೂವ೯ ಅಧ್ಯಕ್ಷ ಸುದಶ೯ನ್ ಎಂ. ಅವರು ಭಾನುವಾರ ಸಮಾಜ ಮಂದಿರದಲ್ಲಿ ಉದ್ಘಾಸಿದರು.
ನಂತರ ಮಾತನಾಡಿದ ಅವರು, ಮಕ್ಕಳಲ್ಲಿ ನಾವು ದೇವರ ರೂಪವನ್ನು ಕಾಣುತ್ತೇವೆ. ಮಕ್ಕಳು ದೇವರ ರೂಪ ಧರಿಸಿ ತಮ್ಮ ಲೀಲೆಯನ್ನು ಪ್ರಸ್ತುತ ಪಡಿಸುವ ಅವಕಾಶ ಮುದ್ದುಕೃಷ್ಣ ಸ್ಪಧೆ೯ಯಲ್ಲಿ ಮಾತ್ರ ಕಾಣಲು ಸಿಗುತ್ತದೆ. ಶ್ರೀ ಕೃಷ್ಣ ವೇಷ ಧರಿಸಿದರೆ ಮಕ್ಕಳಲ್ಲಿ ಸಂಸ್ಕಾರ ಬೆಳಗುತ್ತದೆ ಎಂದರು.
ತೀಪು೯ಗಾರರಾದ ಮಹೇಶ್, ರಮ್ಯಾ ಸುಧೀಂದ್ರ, ಕೃಷ್ಣ ಫ್ರೆಂಡ್ಸ್ ಸಕ೯ಲ್ ನ ಅಧ್ಯಕ್ಷ ಸಂತೋಷ್ ಕುಮಾರ್, ಪ್ರಧಾನ ಕಾಯ೯ದಶಿ೯ ಸುಶಾಂತ್ ಕಕೇ೯ರಾ ಉಪಸ್ಥಿತರಿದ್ದರು.
ಶಿವಾನಂದ ಶಾಂತಿ ಕಾಯ೯ಕ್ರಮ ನಿರೂಪಿಸಿದರು.