ವಿದ್ವಾನ್ ಯಶವಂತ್ ಎಂ.ಜಿಯವರಿಗೆ ಯಶೋಭಿನಂದನ

ವಿದ್ವಾನ್ ಯಶವಂತ್ ಎಂ.ಜಿಯವರಿಗೆ ಯಶೋಭಿನಂದನ


ಮೂಡುಬಿದಿರೆ: ಡಾ.ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಏಕವ್ಯಕ್ತಿ ಗಾಯನವನ್ನು 24 ಗಂಟೆಗಳ ಕಾಲ ಹಾಡಿ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ದಾಖಲೆ ಮಾಡಿರುವ ವಿದ್ವಾನ್ ಯಶವಂತ್ ಎಂ.ಜಿ ಅವರಿಗೆ ಶಿಷ್ಯವೃಂದದವರಿಂದ ಯಶೋಭಿನಂದನವು ಸಮಾಜ ಮಂದಿರದಲ್ಲಿ ಶನಿವಾರ ನಡೆಯಿತು. 

ಸುರಸಾರ್ವ  ಪ್ರೈ. ಲಿ ಸಂಸ್ಥೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು  ಬಿಜೆಪಿಯ ನಿಕಟಪೂವ೯ ದ. ಕ ಜಿಲ್ಲಾಧ್ಯಕ್ಷ ಸುದಶ೯ನ್ ಎಂ. ಕಾಯ೯ಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಉದ್ಯಮಿ ಕೆ.ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿ ದಂಪತಿ ಸಹಿತ ಯಶವಂತ್ ಎಂ.ಜಿ ಅವರನ್ನು ಗೌರವಿಸಲಾಯಿತು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಯಶವಂತ್ ಎಂ.ಜಿ, ಸಂಗೀತದಲ್ಲಿ ನಿರಂತರ ಅಧ್ಯಯನಶೀಲರಾಗಬೇಕು. ತಾಳ್ಮೆಯನ್ನು ನಿರಂತರವನ್ನು ಕಾಯ್ದುಕೊಳ್ಳಬೇಕು. ನಾನು ಮಾಡಿದ ದಾಖಲೆಯು ಇಡೀ ಜಿಲ್ಲೆಗೆ ಸಂದ ಗೌರವವಾಗಿದೆ. ಈ ದಾಖಲೆಯನ್ನು ಮುಂದಿನ ದಿನಗಳಲ್ಲಿ ಶಿಷ್ಯವೃಂದದವರು ಮಾಡಬೇಕು. ಅದೇ ನನಗೆ ಸಲ್ಲಿಸುವ ದೊಡ್ಡ ಗೌರವ ಎಂದರು.

 ಗುಪ್ತಚರ ಇಲಾಖೆಯ ಅಧಿಕಾರಿ ಗೋಪಾಲಕೃಷ್ಣ ಕುಂದರ್, ಪುರಸಭೆ ಅಧ್ಯಕ್ಷ ನಾಗರಾಜ ಪೂಜಾರಿ, ಉದ್ಯಮಿಗಳಾದ ಸುಶಾಂತ್ ಭಂಡಾರಿ, ಉಮಾ ಕಾಂತ್ ಕಾಮತ್, ಪೂರ್ಣಚಂದ್ರ ಜೈನ್, ದಿವ್ಯವರ್ಮ ಬಲ್ಲಾಳ್ ಮುಖ್ಯ ಅತಿಥಿಗಳಾಗಿದ್ದರು. 

ಶಿಷ್ಯವೃಂದದ ಪರವಾಗಿ ವಕೀಲೆ ಮೇಘರಾಣಿ ಮಾತನಾಡಿದರು. 

ಸುನೀಲ್ ಪಣಪಿಲ ಸ್ವಾಗತಿಸಿದರು. ವಿದ್ವಾನ್ ಎನ್.ಆರ್ ದಾಮೋದರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಘಟಕ ನವೀನ್ ಕೋಟ್ಯಾನ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article