
ತಾಲೂಕು ಮಟ್ಟದ ಕಬ್ಬಡಿ ಪಂದ್ಯಾಟ: ಗ್ರಾಮೀಣ ಮಟ್ಟದ ಶಾಲೆಗಳಲ್ಲಿ ಮ್ಯಾಟ್ ಕಬಡ್ಡಿ ತರಬೇತಿ ಅಗತ್ಯ
ಅವರು ದ.ಕ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೂಡುಬಿದಿರೆ ಹಾಗೂ ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಶಾಲೆಯ ಆವರಣದಲ್ಲಿ ನಡೆದ 2025-26ನೇ ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಮ್ಯಾಟ್ ಕಬ್ಬಡಿ ಪಂದ್ಯಾಟ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ, ವಕೀಲ ಕೆ.ಆರ್ ಪಂಡಿತ್ ಅಧ್ಯಕ್ಷತೆ ವಹಿಸಿ, ಕಬ್ಬಡಿ ಎನ್ನುವುದು ಶಕ್ತಿ ಮಾತ್ರವಲ್ಲ. ಯುಕ್ತಿಯ ಕ್ರೀಡೆ. ದೇಶಿಯ ಕ್ರೀಡೆ ಆಯೋಜನೆಗೆ ಊರಿನವರು ಸಹಕಾರ ನೀಡಿರುವುದು ಅಭಿನಂದನಾರ್ಹ ಎಂದರು.
ಮಂಗಳೂರು ಕೆಎಂಎಫ್ ನಿರ್ದೇಶಕ ಸುಚರಿತ ಶೆಟ್ಟಿ, ವಕೀಲ ಶಾಂತಿಪ್ರಸಾದ್ ಹೆಗ್ಡೆ, ಪಾಲಡ್ಕ ಗ್ರಾ.ಪಂ ಸದಸ್ಯರಾದ ಜಗದೀಶ್ ಕೋಟ್ಯಾನ್ ತೊಂದಡ್ಪು, ಕಾಂತಿ ಶೆಟ್ಟಿ, ಅಮಿತಾ ನಾಗೇಶ್, ಅಮಿತಾ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಂದ್ರ ಭಟ್, ಕಡಂದಲೆ ದೇವರಾಜು ಅರಸು ಹಿಂದುಳಿದ ವರ್ಗದ ಹಾಸ್ಟೆಲ್ ಮೇಲ್ವಿಚಾರಕ ಅರುಣ್ ಕುಮಾರ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ನವೀನ್ ಪುತ್ರನ್, ಗ್ರೇಸಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ರಶ್ಮಿ ರಾಜೇಶ್, ಮುಖ್ಯ ಶಿಕ್ಷಕ ದಿನಾಕರ್ ಕುಂಭಾಶಿ, ದೈಹಿಕ ಶಿಕ್ಷಣ ಶಿಕ್ಷಕ ರೂಪಿತ್ ರೈ ಉಪಸ್ಥಿತರಿದ್ದರು.
ಸುಧಾಕರ ಪೊಸ್ರಾಲ್ ಕಾಯ೯ಕ್ರಮ ನಿರೂಪಿಸಿದರು.