ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಮಾದಕ ವ್ಯಸನ ವಿರೋಧಿ ಕಾರ್ಯಕ್ರಮ

ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಮಾದಕ ವ್ಯಸನ ವಿರೋಧಿ ಕಾರ್ಯಕ್ರಮ


ಮೂಡುಬಿದಿರೆ: ಮಾದಕ ವಸ್ತುಗಳಿಗೆ ಹದಿಹರೆಯದವರು ಮಾತ್ರವಲ್ಲ. ಕೆಲವೊಮ್ಮೆ ಹದಿಹರೆಯ ಪೂರ್ವದ ಮಕ್ಕಳು ಬಲಿಯಾಗುತ್ತಿರುವುದು ಖೇದಕರ. ಇದರಿಂದಾಗಿ ಎಳೆ ವಯಸ್ಸಿನಲ್ಲೇ ದೇಹ ಹಾಗೂ ಮನಸ್ಸಿನ ಆತೋಗ್ಯ ಕೆಡುತ್ತಿದೆ. ಮಾದಕ ವ್ಯಸನಿಗಳು ತಮ್ಮ ಆರೋಗ್ಯವನ್ನು ಕೆಡಿಸುವುದು ಮಾತ್ರವಲ್ಲ ಅಪರಾಧ ಚಟುವಟಿಕೆಗಳಲ್ಲಿ ತೊಡಗಿ ಸಮಾಜದ ಆರೋಗ್ಯವನ್ನು ಕೆಡಿಸುತ್ತಾರೆ. ಮಾದಕ ವ್ಯಸನದಿಂದ ದೂರವಿದ್ದರೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಮೂಡುಬಿದಿರೆ ಆರಕ್ಷಕ ಠಾಣೆಯ ಪಿಎಸ್‌ಐ ಪ್ರತಿಭಾ ಹೇಳಿದರು. 

ಅವರು ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಎನ್‌ಎಸ್‌ಎಸ್, ಮಾದಕ ವ್ಯಸನ ವಿರೋಧಿ ಸಮಿತಿ ಹಾಗೂ ಮೂಡುಬಿದಿರೆ ಆರಕ್ಷಕ ಠಾಣೆಯ ಸಹಯೋಗದೊಂದಿಗೆ ನಡೆದ ಮಾದಕ ವ್ಯಸನ ವಿರೋಧಿ ಕಾರ್ಯಕ್ರಮದಲ್ಲಿ ಮಾತನಾಡಿದರು. 


ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅಧ್ಯಕ್ಷತೆ ವಹಿಸಿ, ನಾವು ಒಳ್ಳೆಯ ಅಭ್ಯಾಸಗಳಿಗೆ ವ್ಯಸನಿಗಳೋಣ. ವಿದ್ಯಾರ್ಥಿಗಳು ಮಾನವೀಯ ಸಂಬಂಧ, ಶ್ರೇಷ್ಠ ಅಭ್ಯಾಸಗಳು, ದೇಶದ ಕುರಿತಾಗಿ ಗೌರವ ಬೆಳೆಸಿಕೊಳ್ಳಬೇಕು ಎಂದರು. 

ಮಾದಕ ವ್ಯಸನ ವಿರೋಧಿ ಸಮಿತಿಯ ಮುಖ್ಯಸ್ಥ ಪ್ರದೀಪ್ ಕೆ.ಪಿ ಉಪಸ್ಥಿತರಿದ್ದರು. ಕಾರ್ತಿಕ್ ಎಚ್. ನಿರೂಪಿಸಿ, ಕಾರ್ತಿಕ್ ಅಗಡಿ ವಂದಿಸಿದರು.

ವಿದ್ಯಾರ್ಥಿ ನಿತಿನ್ ಮಾದಕ ವ್ಯಸನ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳಾದ ರಶ್ಮಿತಾ ಶೆಟ್ಟಿ ಹಾಗೂ ಸಂಜನ್ ಕೋಟೆ ಮಾದಕ ವ್ಯಸನದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಂದ ಮಾದಕ ವ್ಯಸನ ಮುಕ್ತ ಸಮಾಜ ಎಂಬ ಪ್ರಹಸನ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article