
ಶ್ರೀ ಧವಲಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟನೆ
Monday, August 11, 2025
ಮೂಡುಬಿದಿರೆ: ಶ್ರೀ ಧವಲಾ ಮಹಾವಿದ್ಯಾಲಯದಲ್ಲಿ 2025-26 ರ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯನ್ನು ಡಿ.ಜೆ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸಂಚಾಲಕ ಕೆ. ಹೇಮರಾಜ್ ಅವರು ಉದ್ಘಾಟಿಸಿದರು.
ಮಂಗಳೂರಿನ ಶಕ್ತಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ನಾಟೇಶ್ ಆಳ್ವ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳು ಧನಾತ್ಮಕನಾಗಿ ಚಿಂತಿಸಬೇಕು. ಒಬ್ಬ ಉತ್ತಮ ನಾಯಕನಾಗಬೇಕಾದರೆ ಪರಿಶ್ರಮ ಅತಿ ಅಗತ್ಯ. ಇಂದು ಪರಿಶ್ರಮ ಪಟ್ಟರೆ ಮುಂದೊಂದು ದಿನ ಅದಕ್ಕೆ ಪ್ರತಿಫಲ ಸಿಕ್ಕೆಯೇ ಸಿಗುತ್ತದೆ. ಎನ್.ಎಸ್.ಎಸ್.ನ ಉದ್ದೇಶವನ್ನು ಅರಿತುಕೊಂಡು ಅದರಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂಧರ್ಭದಲ್ಲಿ ಶ್ರೀಯುತ ನಾಟೇಶ್ ಆಳ್ವರನ್ನು ಸನ್ಮಾನಿಸಲಾಯಿತು.
ಶ್ರೀ ಧವಲಾ ಕಾಲೇಜಿನ ಪ್ರಾಚಾರ್ಯ ಪ್ರೊ. ಪಾರ್ಶ್ವನಾಥ ಅಜ್ಜಿ ಅಧ್ಯಕ್ಷತೆ ವಹಿಸಿದ್ದರು. ಧನುಷ್, ದರ್ಶನ್, ರಕ್ಷಿತಾ, ದಿಕ್ಷಾ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಿ ಮಲ್ಲಿಕಾ ರಾವ್ ಸ್ವಾಗತಿಸಿದರು. ಶ್ರೇಯಾ ನಿರೂಪಿಸಿ, ರಿತಿಕಾ ವಂದಿಸಿದರು.