
ರೋಹಿಣಿ ಸಿಂಧೂರಿ ದಾಸರಿ ಮೂಡುಬಿದಿರೆಯ ಶ್ರೀ ಹನುಮಂತ ದೇವಸ್ಥಾನಕ್ಕೆ ಭೇಟಿ
Friday, August 1, 2025
ಮೂಡುಬಿದಿರೆ: ಐಎಎಸ್ ಆಫೀಸರ್ ರೋಹಿಣಿ ಸಿಂಧೂರಿ ದಾಸರಿ ಅವರು ಗುರುವಾರ ರಾತ್ರಿ ಮೂಡುಬಿದಿರೆಯ ಶ್ರೀ ಹನುಮಂತ ದೇವಸ್ಥಾನಕ್ಕೆ ಕುಟುಂಬದೊಂದಿಗೆ ಭೇಟಿ ನೀಡಿ ದೇವರ ದಶ೯ನ ಪಡೆದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಅದಾನಿ ಗ್ರೂಪ್ ನ ಕಿಶೋರ್ ಆಳ್ವ ಈ ಸಂದಭ೯ದಲ್ಲಿದ್ದರು.
ರೋಹಿಣಿ ಸಿಂಧೂರಿ ಅವರು ಈ ಹಿಂದೆ ಮೂಡುಬಿದಿರೆಯಲ್ಲಿ ಪ್ರಭಾರ ತಹಶೀಲ್ದಾರ್ ಆಗಿ ಕತ೯ವ್ಯ ನಿವ೯ಹಿಸಿದ್ದು ರಸ್ತೆ ಅಗಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೆ ಇಲ್ಲಿನ ಜನರಲ್ಲಿ ಖಡಕ್ ಮಹಿಳಾ ಆಫೀಸರ್ ಎಂದು ಗುರುತಿಸಿಕೊಂಡಿದ್ದರು.