ಎಸ್‌ಎನ್‌ಎಂ ಪಾಲಿಟೆಕ್ನಿಕ್, ಮೂಡುಬಿದಿರೆಯ ಎನ್‌.ಎಸ್.ಎಸ್ ಘಟಕದ ಹಿರಿಯ ವಿದ್ಯಾರ್ಥಿಗಳ ಸಂಘ "ಸಮ್ಮಿಲನ"ದಿಂದ ಕೆಸರಲ್ಲೊಂದು ದಿನ

ಎಸ್‌ಎನ್‌ಎಂ ಪಾಲಿಟೆಕ್ನಿಕ್, ಮೂಡುಬಿದಿರೆಯ ಎನ್‌.ಎಸ್.ಎಸ್ ಘಟಕದ ಹಿರಿಯ ವಿದ್ಯಾರ್ಥಿಗಳ ಸಂಘ "ಸಮ್ಮಿಲನ"ದಿಂದ ಕೆಸರಲ್ಲೊಂದು ದಿನ


ಮೂಡುಬಿದಿರೆ: ಎಸ್‌ಎನ್‌ಎಮ್ ಪಾಲಿಟೆಕ್ನಿಕ್, ಮೂಡುಬಿದಿರೆಯ ಎನ್‌ಎಸ್ಎಸ್ ನ ಹಿರಿಯ ವಿದ್ಯಾರ್ಥಿಗಳ ಸಂಘ ಸಮ್ಮಿಲನದ ಸಂಯುಕ್ತ ಆಶ್ರಯದಲ್ಲಿ “ಕೆಸರಲ್ಲೊಂದು ದಿನ” ಎಂಬ ಕಾರ್ಯಕ್ರಮವು ಭಾನುವಾರ ಯಶಸ್ವಿಯಾಗಿ ನಡೆಯಿತು.

ಗದ್ದೆಯ ಮಾಲಕ ಮೂಡುಬಿದಿರೆ ಬನ್ನಡ್ಕದ  ಪಣಿರಾಜ್ ಜೈನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. 


ಈ ಕೆಸರಲ್ಲೊಂದು ದಿನ  ಶೈಕ್ಷಣಿಕವಾಗಿಯೂ ಗಮನಾರ್ಹ ಕಾರ್ಯಕ್ರಮವಾಗಿ ಎನ್‌.ಎಸ್.ಎಸ್ ವಿದ್ಯಾರ್ಥಿಗಳ ನೆನಪಿನಲ್ಲಿ ಚಿರಸ್ಥಾಯಿಗೊಳಿಸಿತು. ವಿದ್ಯಾರ್ಥಿಗಳು ನಿಸರ್ಗದ ಮಡಿಲಿನಲ್ಲಿ ಕಲಿಕೆಯ ಜತೆಗೆ ಆಟವನ್ನಾಡಿದರು.

ಕಾರ್ಯಕ್ರಮದಲ್ಲಿ 150 ಸ್ವಯಂಸೇವಕರು, 25 ಸಮ್ಮಿಲನ ಸದಸ್ಯರು,  ಕಾಲೇಜಿನ ನಿಕಟ ಪೂರ್ವ ಪ್ರಾಂಶುಪಾಲರಾದ ಜೆ ಜೆ ಪಿಂಟೊ, ಪ್ರಾಂಶುಪಾಲೆ ನೊರೊನ್ಹಾ ತರೀನಾ ರೀಟಾ,  ಎನ್‌.ಎಸ್. ಎಸ್ ಕಾರ್ಯಕ್ರಮ ಅಧಿಕಾರಿಗಳಾದ ರಾಮಪ್ರಸಾದ್ ಎಂ ಮತ್ತು ಗೋಪಾಲಕೃಷ್ಣ ಕೆ.ಎಸ್ ಉಪಸ್ಥಿತರಿದ್ದರು.

ಈ ವಿಶೇಷ ದಿನದಲ್ಲಿ ಎನ್‌.ಎಸ್.ಎಸ್ ಸ್ವಯಂಸೇವಕರಿಗೆ ಗ್ರಾಮೀಣ ಕ್ರೀಡೆ ಮತ್ತು ಪರಿಸರದೊಂದಿಗೆ ಹೊಂದಾಣಿಕೆ ಕಲಿಸುವ ನಿಟ್ಟಿನಲ್ಲಿ ನಾನಾ ಆಟಗಳು ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article