ಕುರಾಲ್ ಕಲಾವಿದೆರ್ ತಂಡದ "ತೀರ್ಥ' ನಾಟಕದ ಮೊದಲ ಪ್ರದಶ೯ನಕ್ಕೆ ಚಾಲನೆ

ಕುರಾಲ್ ಕಲಾವಿದೆರ್ ತಂಡದ "ತೀರ್ಥ' ನಾಟಕದ ಮೊದಲ ಪ್ರದಶ೯ನಕ್ಕೆ ಚಾಲನೆ


ಮೂಡುಬಿದಿರೆ: ಕುರಾಲ್ ಕಲಾವಿದೆರ್ ಬೆದ್ರ ತಂಡದ ನೂತನ ತುಳು/ಕನ್ನಡ ಹಾಸ್ಯಮಯ ನಾಟಕ "ತೀರ್ಥ"ದ ಮೊದಲ ಪ್ರದಶ೯ನಕ್ಕೆ ಮಂಗಳೂರು ಬಲ್ಲಾಳ್ ಗ್ರೂಫ್ ಹೋಟೆಲ್‌ನ ನಿರ್ದೇಶಕ ಚಿರಾಗ್ ಆರಿಗ ಕನ್ನಡ ಭವನದಲ್ಲಿ ಭಾನುವಾರ ದೀಪ ಬೆಳಗಿಸಿ ಚಾಲನೆ ನೀಡಿದರು.

 ದ.ಕ ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಎಂ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕಳೆದ ಬಾರಿ "ಏರ್" ಎಂಬ ನಾಟಕ ಇದೇ ವೇದಿಕೆಯಲ್ಲಿ ಪ್ರದರ್ಶನಗೊಂಡು ಯಶಸ್ವಿ ಪ್ರದರ್ಶನವನ್ನು ಕಂಡಿದೆ. "ತೀರ್ಥ" ನಾಟಕವು ಉತ್ತಮವಾಗಿ ಪ್ರದರ್ಶನ ಕಾಣಲಿ ಎಂದು ಶುಭಹಾರೈಸಿದರು.

ಜೈನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭಾತ್ ಬಲ್ನಾಡ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕಲೆ ಮನಸ್ಸನ್ನು ಅರಳಿಸುವ ಕೆಲಸವನ್ನು ಮಾಡುತ್ತಿದೆ. ಕಲೆಯ ಸಂಘಟನೆ, ಅದರ ಜಾವಬ್ದಾರಿ ನಿರ್ವಹಿಸುವುದು ಕಷ್ಟಕರವಾದ ಕೆಲಸ, ಆದರೂ ಕಲೆಗೆ ಗೌರವ ನೀಡಿ ಶ್ರಮಿಸುತ್ತಿರುವ ಶ್ಲಾಘನೀಯ, ಎಂದ ಅವರು ತುಳು ರಂಗಭೂಮಿ ಕಲಾವಿದರೂ ಉತ್ತಮ ಕಲಾವಿದನಾಗುವ ಹಾಗೇ ಗುರಿಯನ್ನಿಟ್ಟುಕೊಳ್ಳಬೇಕು ಎಂದರು.

ಪ್ರಸಾದ್ ಆಳ್ವ, ಬ್ಯಾಂಕ್ ನಿವೃತ್ತ ಉದ್ಯೋಗಿ ಜನಾರ್ಧನ್ ಶೇರಿಗಾರ್, ಭರತ್ ಶೆಟ್ಟಿ ಇರುವೈಲು, ವಿಜಯ ಕಲಾವಿದೆರ್ ಸಂಚಾಲಕ ಶರತ್ ಶೆಟ್ಟಿ ಕಿನ್ನಿಗೋಳಿ, ಕುರಲ್ ಸಂಚಾಲಕ ದಿಲೀಪ್ ಕುಮಾರ್ ಶೆಟ್ಟಿ, ಪ್ರದೀಪ್ ಜೈನ್, ಗೌರವ ಸಲಹೆಗಾರ ಗಣೇಶ್ ಬೈಲೂರು, ನಿರ್ದೇಶಕ ಯೋಗೀಶ್ ಪೂಜಾರಿ ಪೇರಲ್ಕೆ, ತಂಡದ ಸಾರಥಿ ಜಯಪ್ರಸಾದ್ ಆಳ್ವ, ಶಶಿಧರ್ ದೇವಾಡಿಗ ಉಪಸ್ಥಿತರಿದ್ದರು.

ಸಾನಿಕಾ ಆಳ್ವ ಕಾಯ೯ಕ್ರಮ ನಿರೂಪಿಸಿದರು. ಬಾಲಿಕಾ ಜೈನ್ ಪಡುಕೊಣಾಜೆ ಸ್ವಾಗತಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article