
ಮೀನುಗಾರಿಕಾ ದೋಣಿ ಸಮುದ್ರ ಪಾಲು: ಸ್ಥಳೀಯರಿಂದ 7 ಮೀನುಗಾರರ ರಕ್ಷಣೆ
Monday, August 4, 2025
ಕಾಪು: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿಯೊಂದು ಕಾಪು ಲೈಟ್ ಹೌಸ್ ಬಳಿ ಸಮುದ್ರ ಪಾಲಾಗಿದ್ದು, ಸ್ಥಳೀಯರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಎಲ್ಲರೂ ಅಪಾಯದಿಂದ ಪಾರಾದ ಘಟನೆ ಸೋಮವಾರ ಸಂಭವಿಸಿದೆ.
ಆಂದ್ರ ಮೂಲದ ಮೀನುಗಾರರನ್ನು ಹೊಂದಿದ್ದ ಟ್ರಾಲ್ ಬೋಟ್ ಕಾಪು ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿತ್ತು. ದೋಣಿಯಲ್ಲಿದ್ದ 7 ಮಂದಿ ಮೀನುಗಾರರನ್ನು ಸ್ಥಳೀಯರು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಿ ಅವರನ್ನು ಕಳುಹಿಸಿ ಕೊಡಲಾಗಿದೆ.
ಸ್ಥಳೀಯರಾದ ಧೀರೇಶ್, ಶಿವಾಜಿ, ಬಾಲಕೃಷ್ಣ, ದಯೋದರ ಪುತ್ರನ್, ಕೃಷ್ಣರಾಜ್, ಸಂದೀಪ್, ಲೈಫ್ ಗಾರ್ಡ್ ಚಂದ್ರಶೇಖರ್ ಮೆಂಡನ್ ಮತ್ತು ತಂಡ ಹಾಗೂ ಕೋಸ್ಟಲ್ ಗಾರ್ಡ್ ಗಳಾದ ಪ್ರಶಾಂತ್, ವಿನೋದ್ರವರು ಮೀನುಗಾರರನ್ನು ರಕ್ಷಿಸಿ, ದೋಣಿಯನ್ನು ದಡಕ್ಕೆ ತಲುಪಿಸಲುವಲ್ಲಿ ಯಶಸ್ವಿಯಾಗಿದ್ದಾರೆ.
ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್. ಭೇಟಿ ನೀಡಿದ್ದಾರೆ.