
ಅಕ್ರಮ ಕೆಂಪು ಕಲ್ಲು ವಶ
Monday, August 4, 2025
ಸುಳ್ಯ: ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಅಕ್ರಮವಾಗಿ ಮೂರು ಲಾರಿ ವಾಹನದಲ್ಲಿ ಕೆಂಪುಕಲ್ಲು ಸಾಗಾಟ ನಡೆಸುತ್ತಿರುವುದನ್ನು ಪತ್ತೆ ಹಚ್ಚಿರುವ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇರಳದ ಬಂದಡ್ಕ ಕಡೆಯಿಂದ ಸುಳ್ಯದ ಆಲೆಟ್ಟಿ ಮಾರ್ಗವಾಗಿ ಮಡಿಕೇರಿ ಕಡೆಗೆ ಲಾರಿಯಲ್ಲಿ ಕಾನೂನು ಬಾಹಿರವಾಗಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಕೆಂಪುಕಲ್ಲು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಸುಳ್ಯದ ನಾರ್ಕೋಡು ಮಿತ್ತಡ್ಕ ಗುಡ್ಡೆ ಎಂಬಲ್ಲಿ ಬರುತ್ತಿದ್ದ ಮೂರು ಲಾರಿ ವಾಹನಗಳನ್ನು ತಡೆದು ನಿಲ್ಲಿಸಿ ವಿಚಾರಿಸಿದ ವೇಳೆ ಕೆಂಪು ಕಲ್ಲು ಸಾಗಾಟ ಮಾಡಲು ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಮೂರು ಲಾರಿ ವಾಹನಗಳಲ್ಲಿ ಒಟ್ಟು 700 (300, 200, 200) ಕಲ್ಲುಗಳು ಇದ್ದವು. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಳ್ಯ ಠಾಣೆಯ ಎಸೈ ಸಂತೋಷ್ ಬಿ.ಪಿ. ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.