
ಬಿಲ್ಲವ ಶಕ್ತಿ ಮಾರೂರು ಇದರ ವಾಷಿ೯ಕ ಮಹಾಸಭೆ, ಆಟಿಡೊಂಜಿ ದಿನ
ಬಿಲ್ಲವ ಶಕ್ತಿ ಮಾರೂರು ಇದರ ಅಧ್ಯಕ್ಷ ಶುಭಕರ ಪೂಜಾರಿ ಕೆದಿಗುತ್ತು ಅವರು ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ಕಂಬಳ ಕ್ಷೇತ್ರದ ಸಾಧನೆಗಾಗಿ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್, ಹಿರಿ ನಾಟಿ ವೈದ್ಯ ಕೊರಗಪ್ಪ ಪೂಜಾರಿ ಪಾಂಡಿಬೆಟ್ಟು, ಹಿರಿಯ ನಾಟಕ ಕಲಾವಿದ ಜಾರಪ್ಪ ಪೂಜಾರಿ ಹಿತ್ತಲು ಮನೆ, ಅನ್ನದಾನ ಸೇವೆಗಾಗಿ ವಸಂತ ಪೂಜಾರಿ ವಾಲ್ಪಾಡಿ, ಎಸ್ ಎಸ್ ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ 90ಕ್ಕೂ ಅಧಿಕ ಅಂಕ ಗಳಿಸಿರುವ 5 ಮಂದಿ ಬಿಲ್ಲವ ವಿದ್ಯಾಥಿ೯ಗಳನ್ನು ಸನ್ಮಾನಿಸಲಾಯಿತು.
ಸುಶಾಂತ ಕಕೇ೯ರಾ ಮಾರೂರು ಸ್ವಾಗತಿಸಿದರು. ಗೋಪಾಲ್ ಎ. ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಂಕರ್ ಎ. ಕೋಟ್ಯಾನ್ ಮತ್ತು ಗಿರೀಶ್ ಕೋಟ್ಯಾನ್ ಮಾರೂರು ಕಾಯ೯ಕ್ರಮ ನಿರೂಪಿಸಿದರು. ಅಶೋಕ್ ಬಿ. ಮಾರೂರು ವಂದಿಸಿದರು.ಸಭೆಗೂ ಮೊದಲು ಸ್ಥಳೀಯ ಮಕ್ಕಳಿಂದ ವಿವಿಧ ನೃತ್ಯ ವೈವಿಧ್ಯಗಳು ನಡೆಯಿತು. ನಂತರ ಆಟಿಯ ವಿವಿಧ ಬಗೆಯ ತಿನಿಸುಗಳೊಂದಿಗೆ ಸಹ ಭೋಜನ ನಡೆಯಿತು.
ನೂತನ ಪದಾಧಿಕಾರಿಗಳ ಆಯ್ಕೆ:
ಅಧ್ಯಕ್ಷರಾಗಿ ಗೋಪಾಲ್ ಎ. ಕೋಟ್ಯಾನ್, ಕಾಯ೯ದಶಿ೯ಯಾಗಿ ಅಶೋಕ್ ಬಿ. ಮಾರೂರು, ಕೋಶಾಧಿಕಾರಿಯಾಗಿ ಸುಶಾಂತ್ ಕಕೇ೯ರಾ ಮಾರೂರು ಹಾಗೂ ಉಪಾಧ್ಯಕ್ಷರುಗಳಾಗಿ ರವಿರಾಜ್ ಆರ್. ಕೆ. ಪಾಂಡಿಬೆಟ್ಟು, ಹೇಮಾ ಸುಶಾಂತ್ ಮಾರೂರು ಅವರನ್ನು ಆಯ್ಕೆ ಮಾಡಲಾಯಿತು.