
ಮೂಡುಬಿದಿರೆ ಬಸದಿಗಳಲ್ಲಿ ರತ್ನತ್ರಯ ಸೂತ್ರ ಧಾರಣೆ
Saturday, August 9, 2025
ಮೂಡುಬಿದಿರೆ: ಇಲ್ಲಿನ 18 ಬಸದಿಗಳಲ್ಲಿ ವಿಶೇಷ ಪೂಜೆ ಹವನ ಮೂಲಕ ಶ್ರಾವಕರು ರತ್ನತ್ರಯಸೂತ್ರ ಧಾರಣೆಯನ್ನು ಆಚರಿಸಿದರು.
ಆಚಾರ್ಯ ಗುಲಾಬ್ ಭೂಷಣ ಮುನಿರಾಜ್ ಆಶೀರ್ವಚನ ನೀಡಿದರು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಧರ್ಮ ಸಂದೇಶ ನೀಡಿ, ಧರ್ಮ ನಿರತರದವರಿಗೆ ರಕ್ಷಣೆ ನೀಡುವ ಭಾವನೆ ಮೂಡುವ ದಿನ ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಪ್ರಮುಖರಾದ ತಿಲಕ್ ಪ್ರಸಾದ್, ದರ್ಶನ್ ಶೆಟ್ಟಿ, ಸಂಜಯ್ ಕುಮಾರ್, ಸುದೇಶ್ ಬೆಟ್ ಕೇರಿ, ಶ್ವೇತಾ ಜೈನ್, ಸೂರಜ್ ಮತ್ತಿತರರಿದ್ದರು.
ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶದ ನೂರಕ್ಕೂ ಅಧಿಕ ಭಕ್ತರು ಪಾಲ್ಗೊಂಡರು.