ಮೂಡುಬಿದಿರೆ ತಾಲೂಕಿನ ವಿವಿಧ ಕಡೆಗಳಲ್ಲಿ ವರಮಹಾಲಕ್ಷೀ ಪೂಜೆ, ವೃತಾಚರಣೆ
ಕಲ್ಲಬೆಟ್ಟು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಮಾರೂರು ಖಂಡಿಗೆಯ ರಾಮದಾಸ ಅಸ್ರಣ್ಣ ಅವರ ಪೂಜಾ ವಿಧಿ ವಿಧಾನಗಳೊಂದಿಗೆ, ಕಡಂದಲೆ-ಪಾಲಡ್ಕ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವ ಸಂಘದ ಆಶ್ರಯದಲ್ಲಿ 10ನೇ ವರ್ಷದ ಲಕ್ಷ ಕುಂಕುಮಾರ್ಚನೆ ಹಾಗೂ ಸಾರ್ವಜನಿಕ ವರಮಹಾಲಕ್ಷ್ಮೀ ಪೂಜೆ, ವರಮಹಾಲಕ್ಷ್ಮೀ ಸೇವಾ ಸಮಿತಿ ಶ್ರೀ ಕ್ಷೇತ್ರ ಇರುವೈಲು ಇದರ ವತಿಯಿಂದ ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ ಅವರ ನೇತೃತ್ವದಲ್ಲಿ, ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಶ್ರೀ ನಾರಾಯಣಗುರು ಸೇವಾದಳ ಮತ್ತು ಶ್ರೀ ನಾರಾಯಣಗುರು ಮಹಿಳಾ ಘಟಕದ ಆಶ್ರಯದಲ್ಲಿ ಕಾಮಧೇನು ಸಭಾಭವನದಲ್ಲಿ.
ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿಯ ವತಿಯಿಂದ ವರಮಹಾಲಕ್ಷ್ಮೀ ವೃತ ಪೂಜೆಯು ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಪುರೋಹಿತ್ ಕೇಶವ ಆಚಾರ್ಯರ ನೇತೃತ್ವದಲ್ಲಿ ಶುಕ್ರವಾರ ನಡೆಯಿತು.
ಬೆಳಿಗ್ಗೆ ಕಲಶ ಪ್ರತಿಷ್ಠೆ, ಮಹಿಳೆಯರಿಂದ ಲಲಿತಾಸಹಸ್ರನಾಮ ಪಾರಾಯಣ ಹಾಗೂ ಮೂಡುಬಿದಿರೆಯ ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನ ಮುಂತಾದ ಕಡೆಗಳಲ್ಲಿ ವರಮಹಾಲಕ್ಷ್ಮಿ ಪೂಜೆ, ವೃತಾಚರಣೆಯು ವಿಜೃಂಭಣೆ ಹಾಗೂ ಭಕ್ತಿಯಿಂದ ನೆರವೇರಿತು.