ಕಡಂದಲೆ ಮೈನ್ ಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಣೆ
Saturday, August 23, 2025
ಮೂಡುಬಿದಿರೆ: 2023 ಅಗಸ್ಟ್ 23ರಂದು ಚಂದ್ರಯಾನ 3ರ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಇಳಿದ ನೆನಪಿಗಾಗಿ, ಕಡಂದಲೆ ಮೈನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ವಿಜ್ಞಾನ ಶಿಕ್ಷಕ ಶರಣಯ್ಯ, ಬಾಹ್ಯಾಕಾಶದ ಮಹತ್ವ, ಅದಕ್ಕೆ ಶ್ರಮಿಸಿದ ಭಾರತೀಯ ವಿಜ್ಞಾನಿಗಳ ಕುರಿತು ಮಾಹಿತಿ ನೀಡಿದರು.
ವಿಜ್ಞಾನದ ವಿವಿಧ ಪ್ರಯೋಗಗಳ ಮೂಲಕ ಬಾಹ್ಯಾಕಾಶ ಮಹತ್ವವನ್ನು ಸಾರಲಾಯಿತು.
ಮುಖ್ಯ ಶಿಕ್ಷಕ ಲೀಡಿಯಾ ಸೆರಾವೊ, ಸಹಶಿಕ್ಷಕಿ ಎಲಿಜಾ ಪೌಲಿನ್, ಗೌರವ ಶಿಕ್ಷಕಿ ಪುಷ್ಪಲತಾ, ವಿದ್ಯಾರ್ಥಿ ನಾಯಕಿ ಮೋಕ್ಷಾ ಉಪಸ್ಥಿತರಿದ್ದರು.
