
ಆ.31 ರಂದು ಕುಕ್ಕೆ ದೇವಳದಲ್ಲಿ ಹೊಸ್ತಾರೋಗಣೆ: ದರುಶನದಲ್ಲಿ ವ್ಯತ್ಯಯ
Friday, August 29, 2025
ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.31 ರಂದು ಹೊಸ್ತಾರೋಗಣೆ (ನವಾನ್ನ ಬೋಜನ) ನೆರವೇರಲಿದೆ. ಈ ನಿಮಿತ್ತ ಶ್ರೀ ದೇವರ ದರುಶನ ಮತ್ತು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಭಕ್ತರು ಸಹಕರಿಸಬೇಕಾಗಿ ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.
ಆದಿತ್ಯವಾರ ಪ್ರಾತಃಕಾಲ 5.15ಕ್ಕೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ ನೆರವೇರಲಿದೆ. ನಂತರ ಬೆಳಗ್ಗೆ 7.30ಕ್ಕೆ ತೆನೆ ತರುವುದು ಮತ್ತು ಕದಿರು ಪೂಜೆ ನಡೆಯಲಿದೆ.ನಂತರ ಭಕ್ತರಿಗೆ ಕದಿರು ವಿತರಣೆ ನೆರವೇರಲಿದೆ.
ದರುಶನದಲ್ಲಿ ವ್ಯತ್ಯಯ:
ಹೊಸ್ತಾರೋಗಣೆ ನಿಮಿತ್ತ ಆದಿತ್ಯವಾರ ಬೆಳಗ್ಗೆ 10 ಗಂಟೆಯ ನಂತರ ಶ್ರೀ ದೇವರ ದರುಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೆ ಬೆಳಗ್ಗಿನ ಆಶ್ಲೇಷ ಬಲಿ ಸೇವೆಯು ಬೆಳಗ್ಗೆ 9 ಗಂಟೆಯಿಂದ 2 ಪಾಳಿಯಲ್ಲಿ ನಡೆಯಲಿದೆ.ಭಕ್ತರು ಸಹಕರಿಸಬೇಕು ಎಂದು ದೇವಳದ ಪ್ರಕಟಣೆ ತಿಳಿಸಿದೆ.