ಕೊಲ್ಲಮೊಗ್ರುದಲ್ಲಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

ಕೊಲ್ಲಮೊಗ್ರುದಲ್ಲಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ


ಸುಬ್ರಹ್ಮಣ್ಯ: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅಮಾನತುಗೊಂಡಿದ್ದ ಕೊಲ್ಲಮೋಗ್ರ ಗ್ರಾಮ ಪಂಚಾಯತ್ ಡಾಟಾ ಎಂಟ್ರಿ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸದೆ ಪುನಃ ಕರ್ತವ್ಯಕ್ಕೆ ನೇಮಕ ಮಾಡಿರುವುದನ್ನು ವಿರೋಧಿಸಿ ಶುಕ್ರವಾರ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರು ಭ್ರಷ್ಟಾಚಾರ ವಿರೋಧಿ ಘೋಷಣೆಗಳನ್ನು ಕೂಗಿದರು.

ಪಂಚಾಯತ್‌ನಲ್ಲಿ ಜನರ ಹಿತದಾಯಕ ನಿರ್ವಹಣೆ ಬದಲಾಗಿ ಭ್ರಷ್ಟಾಚಾರ ನಡೆಯುತ್ತಿದೆ. ತನಿಖೆ ಮುಗಿಯದೇ ಅಮಾನತುಗೊಂಡವರನ್ನು ನೇಮಕ ಮಾಡುವುದು ಪಾರದರ್ಶಕ ಆಡಳಿತಕ್ಕೆ ಧಕ್ಕೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತಕ್ಷಣ ನ್ಯಾಯಸಮ್ಮತ ತನಿಖೆ ನಡೆಯಬೇಕು.ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಮಹಾಸಭೆಯಲ್ಲಿ ಪಿಡಿಒ ಹಾಗೂ ದೂರವಾಣಿ ಮೂಲಕ ಇಒ ರವರಲ್ಲಿ ಮಾಹಿತಿ ಕೇಳಿದಾಗ ಈ ಬಗ್ಗೆ ಇಒ ರವರು ತನಗೆ ಯಾವುದೇ ಮಾಹಿತಿ ಇರುವುದಿಲ್ಲ ಪಂಚಾಯತ್‌ನಿಂದಲೇ ಆರೋಪಿತನನ್ನು ಮೂರು ತಿಂಗಳುಗಳ ಕಾಲ ಅಮಾನತಿನಲ್ಲಿರಿಸಿದ್ದು ಮತ್ತೆ ತನ್ನ ಕೆಲಸಕ್ಕೆ ಹಾಜರಾಗಿದ್ದನೆ ಎಂದು ತಿಳಿಸಿರುತ್ತಾರೆ. 


ಇದರಲ್ಲಿ ಪಿಡಿಒ ಹಾಗೂ ಇಒ ಇವರೆಲ್ಲರ ವ್ಯವಸ್ಥೆಯಲ್ಲಿ ಲೋಪ ಇರುವುದರಿಂದ ಸಮಗ್ರವಾಗಿ ಲೊಕಾಯುಕ್ತ ತನಿಖೆ ನಡೆಸುವಂತೆ ಒತ್ತಾಯಸುವುದು ಎಂದು ನ್ಯಾಯವಾದಿ ಪ್ರದೀಪ್ ಕುಮಾರ್ ಮಾದ್ಯಮಕ್ಕೆ ಹೇಳಿಕೆ ನೀಡಿದರು. 

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಟಿ.ಎನ್. ಮಾತನಾಡಿ, ಗ್ರಾಮ ಪಂಚಾಯತಿನ ಆಡಳಿತ ವ್ಯವಸ್ಥೆಯನ್ನು ಗಾಳಿಗೆ ತೂರಿ ಇಒ ಅವರು ಭ್ರಷ್ಟಾಚಾರ ಆರೊಪ ಹೊತ್ತಿರುವ ಸಿಭಂದಿಯನ್ನು ತನಿಖೆ ನಡೆಸದೆ ಮರುನೇಮಕ ಮಾಡಿರುವುದು ದುರದೃಷ್ಟಕರ ಮತ್ತು ಮುಂದೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಯಾವುದೇ ಪಕ್ಷಬೇಧವಿಲ್ಲದೆ ಊರಿನ ಎಲ್ಲಾ ನಾಗರಿಕರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು ಪಂಚಾಯತ್ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರಬೇಕು. ಭ್ರಷ್ಟಾಚಾರದ ವಿರುದ್ಧ ಪಕ್ಷಭೇದವಿಲ್ಲದೆ ಮರು ತನಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಪೀಠೋಪಕರಣಗಳ ಕಳವು:

ಅಮಾನತುಗೊಂಡಿದ್ದ ಪಂಚಾಯತ್ ಡಾಟಾ ಎಂಟ್ರಿ ಸಿಬ್ಬಂದಿ ಸಂತೋಷ್ ಕೆ. ಗಡಿಕಲ್ಲು ಪಂಚಾಯತ್ತಿನ ಪೀಠೋಪಕರಣಗಳನ್ನು ಕದ್ದು ತನ್ನ ಮನೆಗೆ ತೆಗೆದುಕೊಂಡುಹೋಗಿದ್ದು ಮತ್ತು ಪಂಚಾಯತಿನ ತ್ಯಾಜ್ಯ ವಿಲೇವಾರಿ ವಾಹನವನ್ನು ತನ್ನ ಸ್ವಂತ ಕೆಲಸಕ್ಕಾಗಿ ಉಪಯೋಗಿಸುತಿದ್ದು ಹಾಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನರಿಗೆ ಬರುವಂತಹ ಹಣವನ್ನು ತನ್ನ ಸ್ವಂತ, ಮನೆಯವರ ಖಾತೆಗೆ ಹಣ ವಗಾವಣೆ ಮಾಡಿದ್ದು. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾನಂದ ಬಿಲಿಮಲೆ ಮಾದ್ಯಮದ ಮೂಲಕ ಒತ್ತಾಯಿಸಿದರು. 

ವ್ಯವಸ್ಥೆಯಲ್ಲಿ ಲೋಪ ತಶಿಲ್ದಾರವರ ನಕಲಿ ಹಸಿರು ಸಹಿ ಆರೋಪ:

ಭ್ರಷ್ಟಾಚಾರ ಆರೋಪ ಹೊತ್ತಿರುವ ಸಿಬಂದಿಯು ಈ ಹಿಂದೆ ತಹಶಿಲ್ದಾರರ ಹಸಿರು ಸಹಿಯನ್ನು ನಕಲುಮಾಡಿ ಹಣ ಬಟವಡೆ ಮಾಡಿದ್ದು ಇದರ ಬಗ್ಗೆ ತನಿಖೆ ಮಾಡಲು ಅಗ್ರಹ ಮಾಡಲಾಯಿತು.

ಈ ಸಂದರ್ಭದಲ್ಲಿ ಉದಯ ಶಿವಾಲ, ಡ್ಯಾನಿಯಾಳುದಾಳು ಹರಿಹರ ಕೊಲ್ಲಮೊಗ್ರ ಕೃಷಿಪತ್ತಿನ ನಿರ್ದೇಶಕರು, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಶೇಖರ್ ಅಂಬೆಕಲ್ಲು, ಹರಿಪ್ರಸಾದ್ ಮಲ್ಲಾಜೆ ಸ್ಥಾಪಕಾಧ್ಯಕ್ಷರು ಗಣೇಶೋತ್ಸವ ಸಮೀತಿ ಕೊಲ್ಲಮೊಗ್ರು, ಪ್ರಮುಕರಾದ ಗಿರೀಶ್, ರಕ್ಷಿತ್ ಡಿ., ಸುರೇಶ್, ಭರತ್, ಪ್ರಶಂತ್ ಎ.ಸಿ., ಸತೀಶ್ ಟಿ.ಎನ್., ಹರೀಶ್ ಬಲ್ಲಡ್ಕ, ಹೇಮಂತ್ ದೋಲನ, ಗಣೇಶ ಶಿವಾಲ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಊರಿನ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article