ಸೂಟರ್ಪೇಟೆ ಗಣೇಶೋತ್ಸವ
ಸೂಟರ್ಪೇಟೆ: ಸೂಟರ್ಪೇಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ಇದರ ವತಿಯಿಂದ ನಡೆಯುವ 7ನೇ ವರ್ಷದ ಸೂಟರ್ಪೇಟೆ ಗಣೇಶೋತ್ಸವ ಈ ಬಾರಿ ವಿಜೃಂಭಣೆಯಲ್ಲಿ ನಡೆಯಲಿದೆ.
ಸೂಟರ್ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದ ಶ್ರೀ ಬಬ್ಬುಸ್ವಾಮಿ ರಂಗ ಮಂದಿರದಲ್ಲಿ ನಡೆಯುವ ಸೂಟರ್ಪೇಟೆ ಗಣೇಶೋತ್ಸವದಲ್ಲಿ ಕರ್ನಾಟಕ ರಾಜ್ಯದ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್, ಸಂಸದ ಬ್ರಿಜೇಶ್ ಚೌಟ, ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ, ಕಿಶೋರ್ ಕುಮಾರ್, ಸೂಟರ್ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದ ಗುರಿಕಾರ ಎಸ್. ರಾಘವೇಂದ್ರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿರುವರು.
ಆ.26 ರಂದು ಮೆರವಣಿಗೆ ಮೂಲಕ ಶ್ರೀ ಗಣಪತಿ ದೇವರ ವಿಗ್ರಹವನ್ನು ಶ್ರೀ ಬಬ್ಬುಸ್ವಾಮಿ ರಂಗ ಮಂದಿರದ ಮಂಟಪಕ್ಕೆ ತರಲಾಗುವುದು. ಆ.27ರಂದು ಗಣೇಶ ಚತುರ್ಥಿ ದಿನ ಬೆಳಗ್ಗೆ ಗಣಹೋಮ ನಡೆದು ಶ್ರೀ ಗಣಪತಿ ದೇವರ ವಿಗ್ರಹ ಪ್ರತಿಷ್ಟಾಪನೆ ಜೊತೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಸಂಜೆ ವಿಶೇಷ ರಂಗ ಪೂಜೆ ನಡೆದು ಗಣಪತಿ ದೇವರ ವಿಗ್ರಹದ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಸೂಟರ್ಪೇಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.