ಉಡುಪಿ-ಅಂಬಾಗಿಲು: 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ
ಆ.26ರಂದು ಬೆಳಗ್ಗೆ 10 ಗಂಟೆಗೆ ಸಮಿತಿಯ ನೂತನ ಕಚೇರಿಯಲ್ಲಿ ಗಣಹೋಮ ಜರುಗಲಿದೆ.
ಆ.27ರಂದು ಬೆಳಗ್ಗೆ 9.30ಕ್ಕೆ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠಾಪನೆ, ಪ್ರಾರ್ಥನೆ, ಗಣಯಾಗ ನೆರವೇರಲಿದೆ.
ಆ.28ರಂದು ಬೆಳಗ್ಗೆ 10.30ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ 8ಕ್ಕೆ ರಂಗಪೂಜೆ, ಆ.29 ರಂದು ಬೆಳಗ್ಗೆ 10 ಗಂಟೆಗೆ ಮಂಗಳ ದ್ವಾದಶ ನಾರಿಕೇಳ ಯಾಗ, ಸಂಜೆ 4 ಗಂಟೆಗೆ ವಿಸರ್ಜನಾ ಮೆರವಣಿಗೆಗೆ ಚಾಲನೆ, ಬಳಿಕ ಮಾಯಾ ಗುಂಡಿ ಕೆರೆಯಲ್ಲಿ ಜಲಸ್ತಂಭನ ನೆರವೇರಲಿದೆ.
ಅ.27ರಂದು ಸಂಜೆ 6.30ಕ್ಕೆ ರುಕ್ಷ್ಮಿಣಿ ಅವನ್ಯೂದಲ್ಲಿ ಸಮಿತಿಯ ಸ್ವಂತ ಕಟ್ಟಡದಲ್ಲಿನ ನೂತನ ಕಚೇರಿಯನ್ನು ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಜಯ ಪ್ರಕಾಶ್ ಕೆದ್ಲಾಯ ಉದ್ಘಾಟಿಸಲಿದ್ದಾರೆ. ಸಮಿತಿ ಅಧ್ಯಕ್ಷ ನಿತ್ಯಾನಂದ ಶೇರಿಗಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಯಶಪಾಲ್ ಎ. ಸುವರ್ಣ, ಕಾಂಚನ ಹುಂಡೈನ ಪ್ರಸಾದ್ ರಾಜ್ ಕಾಂಚನ್, ಉದ್ಯಮಿ ಪ್ರವೀಣ್ ಶೆಟ್ಟಿ ಕಲ್ಕೂರ ಬಿಲ್ಡರ್ಸ್ ನ ರಂಜನ್ ಕಲ್ಕೂರ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಿಟ್ಟೂರು ಅನುದಾನಿತ ಹಿ.ಪ್ರಾ. ಶಾಲಾ ಸಂಚಾಲಕಿ ಬ್ರಿಜಿತ್ ಕರ್ನೆಲಿಯೋ, ಪ್ರಭು ಟ್ರೇಡರ್ಸ್‌ನ ಸೀತಾರಾಮ ಪ್ರಭು ಭಾಗವಹಿಸಲಿದ್ದಾರೆ.
ರಾತ್ರಿ 8.30 ಗಂಟೆಗೆ ಸೃಷ್ಟಿ ನೃತ್ಯ ಕಲಾ ಕುಟೀರದಿಂದ ನೃತ್ಯ ವೈಭವ ರೂಪಕ ಮತ್ತು 'ಮಹಾಕಾಳಿ' ನೃತ್ಯರೂಪಕ ಜರುಗಲಿದೆ. ಆ.28ರಂದು ಸಂಜೆ 7 ಗಂಟೆಗೆ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದ್ದು, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸಮಿತಿ ಅಧ್ಯಕ್ಷ ನಿತ್ಯಾನಂದ ಶೇರಿಗಾರ್ ಅಧ್ಯಕ್ಷತೆ ವಹಿಸಲಿದ್ದು, ಉದ್ಯಮಿ ಚಂದ್ರ ಶೇಖರ್ ಶೆಟ್ಟಿ ಅಂಬಾಗಿಲು, ನಗರ ಸಭೆಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ನಗರಸಭೆ ಸದಸ್ಯ ಸಂತೋಷ್ ಜತ್ತನ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಸಾಲ ಗುರಿಕಾರ ದಿನೇಶ ಕೊಡಪದವು ಮತ್ತು ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರಿಂದ ಯಕ್ಷಹಾಸ್ಯ ವೈಭವ 'ಯಕ್ಷ ತೆಲಿಕೆ' ಕಾರ್ಯಕ್ರಮ ಜರುಗಲಿದೆ.
ಆ.29ರಂದು ಸಂಜೆ ನಡೆಯುವ ವಿಸರ್ಜನಾ ಮೆರವಣಿಗೆಯ ಬಳಿಕ ಭದ್ರಾವತಿ ಬ್ರದರ್ಸ್ ವತಿಯಿಂದ 'ಸಂಗೀತ ರಸಮಂಜರಿ' ಕಾರ್ಯಕ್ರಮ ಜರುಗಲಿದೆ ಎಂದು ಸಮಿತಿಯ ಅಧ್ಯಕ್ಷ ನಿತ್ಯಾನಂದ ಶೇರಿಗಾರ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪ್ರಭು ತಿಳಿಸಿದ್ದಾರೆ.