ಕಾರು ತಾಗಿದ ವಿಚಾರದಲ್ಲಿ ಹಲ್ಲೆ: ದೂರು ಪ್ರತಿದೂರು ದಾಖಲು
ಉಳ್ಳಾಲ: ಕಾರು ತಾಗಿದ ವಿಚಾರದಲ್ಲಿ ಎರಡು ಕಾರುಗಳಲ್ಲಿ ಇದ್ದ ವ್ಯಕ್ತಿಗಳ ಮಧ್ಯೆ ಮಾತಿನ ಚಕಮಕಿ ನಡೆದು ಪರಸ್ಪರ ಹೊಡೆದಾಟ ನಡೆದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಬಳಿ ನಿನ್ನೆ ನಡೆದಿದೆ.
ಘಟನೆ ವಿವರ: ಮದುವೆ ಸಮಾರಂಭದಲ್ಲಿ ಭಾಗವಹಿಸಲು ಮಾರುತಿ ಕಾರ್‌ನಲ್ಲಿ ಬರುತ್ತಿದ್ದ ಕುಟುಂಬವೊಂದು ಕುಂಜತ್ತೂರು ನಿಂದ ಬರುತ್ತಿತ್ತು. ಈ ಕಾರ್‌ನ ಹಿಂದುಗಡೆ ಯಿಂದ ಶಿಫ್ಟ್ ಕಾರ್ ಟೋಲ್ ಗೇಟ್ ಬಳಿ ಶಿಫ್ಟ್ ಒಮ್ಮಲೇ ಪ್ರವೇಶಿಸಿದೆ. ಈ ಸಂದರ್ಭದಲ್ಲಿ ಮಾರುತಿ ಕಾರಿಗೆ ಹಿಂದಿನಿಂದ ತಾಗಿದೆ. ಇದೇ ವಿಚಾರದಲ್ಲಿ ಎರಡೂ ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹೊಡೆದಾಟ ನಡೆದಿದೆ ಎಂದು ತಿಳಿದು ಬಂದಿದೆ.
ಕಲ್ಲಾಪು ಹಾಲ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಕುಂಜತ್ತೂರಿನಿಂದ ಸಯ್ಯಿದ್ ತ್ವಾಹಾ ಶಾನ್, ಅವರ ತಾಯಿ ಮನ್ಸೂರಾ ಅವರ ಕುಟುಂಬ ಬರುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಈ ಬಗ್ಗೆ ಸಯ್ಯಿದ್ ತ್ವಾಹ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ.
ಸೆಯ್ಯದ್ ತ್ವಾಹ, ಅವರ ತಾಯಿ ಮನ್ಸೂರಾ ಮತ್ತು ಮಕ್ಕಳು ಮಾರುತಿ ಕಾರ್‌ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಟೋಲ್ ಗೇಟ್ ಬಳಿ ಒಮ್ಮೆಲೇ ದಾಟಿ ಬಂದ ಶಿಫ್ಟ್ ಕಾರು ಮಾರುತಿ ಕಾರ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದು ಮುಂದಕೆ ಸಾಗಿದೆ.
ನಾನು ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಆ ಕಾರಿನವರು ನನ್ನ ಕಾರನ್ನು ನಿಲ್ಲಿಸಲು ಸೂಚಿಸಿದರು.ಕಾರಲ್ಲಿದ್ದ ಇಬ್ಬರು ಗಂಡಸರು ಹಾಗೂ ಇಬ್ಬರು ಹೆಂಗಸರು ಇಳಿದು ನನಗೆ ಹಾಗೂ ನನ್ನ ಕಾರಲ್ಲಿದ್ದ ನನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಸಿ, ಕೊಲೆ ಬೆದರಿಕೆಯೊಡ್ಡಿದ್ದಾರೆ. ಇದರ ಬಳಿಕ ಕೊಲ್ಯ ಎಂಬಲ್ಲಿ ವಾಹನದ ಮೇಲೆ ದಾಳಿ ಮಾಡಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ನನ್ನ ಹಾಗೂ ನನ್ನ ತಾಯಿಯ ಮೇಲೆ ಪಂಚ್‌ನಿಂದ ಹಲ್ಲೆಗೈದಿದ್ದಾರೆ ಎಂದು ತ್ವಾಹ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಶಿಫ್ಟ್ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ಶಕ್ತಿನಗರದ ಬಿಂದ್ಯಾ ದೂರು ನೀಡಿದ್ದು, ಕಾರ್‌ನಲ್ಲಿ ನಾನು, ರಕ್ಷಾ, ರೀಷ್ಮಾ ಜೀವನ್, ಮನ್ವಿತ್ ಪ್ರಯಾಣಿಸುತ್ತಿದ್ದೆವು. ಟೋಲ್ ಗೇಟ್ ಬಳಿ ಹಠಾತ್ತನೆ ಬ್ರೇಕ್ ಹೊಡೆದು ನಿಂತಿದ್ದ ಮಾರುತಿ 800 ಕಾರಿನ ಹಿಂಬಂದಿಗೆ ನಮ್ಮ ಕಾರು ಢಿಕ್ಕಿ ಹೊಡೆದಿದೆ.
ನಾವು ಸ್ವಲ್ಪ ಮುಂದಕ್ಕೆ ಚಲಿಸಿದಾಗ ಹಿಂಬಾಳಿಸಿ ಬಂದ ಮಾರುತಿ ೮೦೦ನ ಚಾಲಕನು ತಲಪಾಡಿಯ ಮರೋಳಿ ಬಾರ್ ಬಳಿ ನಮ್ಮ ಕಾರನ್ನು ಅಡ್ಡ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಈ ಸಂದರ್ಭದಲ್ಲಿ ಕೆಲವು ಬೈಕ್‌ನಲ್ಲಿ ಬಂದು ಸೇರಿದ ಜನರು ಹೆಲ್ಮೆಟ್‌ನಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿದೂರಿನಲ್ಲಿ ತಿಳಿಸಿದ್ದಾರೆ. ಎರಡೂ ದೂರುಗಳನ್ನು ಸ್ವೀಕರಿಸಿದ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.