ಪೊಲೀಸ್ ಜೀಪಿಗೆ ಬೈಕ್ ಢಿಕ್ಕಿ: ಸವಾರ ಗಾಯ
Tuesday, September 23, 2025
ಬಂಟ್ವಾಳ: ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನವೊಂದು ಪೊಲೀಸ್ ಜೀಪ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಾಯಗೊಂಡ ಘಟನೆ ಪುಂಜಾಲಕಟ್ಟೆಯಲ್ಲಿ ಮಂಗಳವಾರ ನಡೆದಿದೆ.
ಪಿಲಾತಬೆಟ್ಟು ನಿವಾಸಿ ಹರ್ಷಿತ್ (19) ಗಾಯಗೊಂಡವರಾಗಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯ ಪಿ.ಎಸ್.ಐ. ಅವರು ಕಾರ್ಯನಿಮಿತ್ತ ಇಲಾಖಾ ಜೀಪಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಪುಂಜಾಲಕಟ್ಟೆಯ ಕಟ್ಟೆಮನೆ ತಿರುವಿನಲ್ಲಿ ಈ ಘಟನೆ ನಡೆದಿದೆ.
ದ್ವಿಚಕ್ರವಾಹನ ಸವಾರ ನಿಯಂತ್ರಣ ಕಳೆದುಕೊಂಡು ಪೊಲೀಸ್ ಜೀಪ್‌ಗೆ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದು ಗಾಯಗೊಂಡಿದ್ದಾನೆ.
ಈತನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.