
ಬಿ.ಸಿ. ರೋಡಿನ ಉಪನೋಂದಣಿ ಕಚೇರಿಯಲ್ಲಿ ಪ್ರತ್ಯಕ್ಷರಾದ ನಟಿ ರಾಧಿಕಾ
Friday, September 19, 2025
ಬಂಟ್ವಾಳ: ಬಿ.ಸಿ. ರೋಡಿನ ಆಡಳಿತ ಸೌಧದ (ಮಿನಿ ವಿಧಾನಸೌಧ) ಎರಡನೇ ಅಂತಸ್ತಿನಲ್ಲಿರುವ ಉಪನೋಂದಾವಣೆ ಕಚೇರಿಯಲ್ಲಿ ಚಿತ್ರನಟಿ ರಾಧಿಕಾ ಕುಮಾರ ಸ್ವಾಮಿ ಅವರು ತನ್ನ ತಾಯಿಯ ಜತೆ ದಿಢೀರ್ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ್ದಾರೆ.
ನೋಂದಣಿ ಕಚೇರಿಗೆ ತನ್ನ ವಯಕ್ತಿಕ ಕೆಲಸಕ್ಕೆ ಬಂದಿದ್ದ ರಾಧಿಕಾ ಅವರಿಗೆ ಕಚೇರಿ ಸಿಬ್ಬಂದಿಗಳು ವಿಶೇಷ ಗೌರವ ನೀಡಿ ಕೇವಲ ಅರ್ಧ ತಾಸಿನೊಳಗಾಗಿ ಅವರ ಕೆಲಸ ಪೂರೈಸಿಕಳುಹಿಸಿಕೊಟ್ಟಿದ್ದಾರೆ.
ನಟಿ ರಾಧಿಕಾ ಅವರು ಜಮೀನು ಖರೀದಿಸಿ ಬಳಿಕ ನೊಂದಣಿಗಾಗಿ ಬಂದಿರಬೇಕೆಂದು ನಂಬಲಾಗಿತ್ತು.
ಆದರೆ ಅವರು ಈ ಹಿಂದೆ ಖರೀದಿ ಮಾಡಿರುವ ಜಮೀನಿನ ಮೇಲೆ ತೆಗೆದಿದ್ದ ಅಡಮಾನವನ್ನು (ಸಾಲ) ತೀರುವಳಿ ರಶೀದಿ ಮಾಡಲು ಬಂದಿದ್ದಾರೆ ಎಂದು ಉಪನೊಂದಾವಣೆ ಕಚೇರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ವೇಳೆ ಕಚೇರಿ ಸಿಬ್ಬಂದಿಗಳ ಸಹಿತ ಕಚೇರಿಗೆ ಬಂದಿದ್ದ ಸಾರ್ವಜನಿಕರು ರಾಧಿಕಾ ಅವರ ಜೊತೆ ಸೆಲ್ಫಿ ಹಾಗೂ ಛಾಯಾಚಿತ್ರ ತೆಗೆಸಿಕೊಂಡರು.