ಬ್ಯಾಂಕ್ ಹಾಗೂ ಸ್ವರ್ಣಾಭರಣ ಮಳಿಗೆಯಲ್ಲಿ ಸುರಕ್ಷತೆ ವಹಿಸಿ: ಅನಿಲ್ ಕುಮಾರ್ ಎಸ್. ಭೂಮ ರೆಡ್ಡಿ

ಬ್ಯಾಂಕ್ ಹಾಗೂ ಸ್ವರ್ಣಾಭರಣ ಮಳಿಗೆಯಲ್ಲಿ ಸುರಕ್ಷತೆ ವಹಿಸಿ: ಅನಿಲ್ ಕುಮಾರ್ ಎಸ್. ಭೂಮ ರೆಡ್ಡಿ


ಬಂಟ್ವಾಳ: ಬ್ಯಾಂಕ್ ಹಾಗೂ ಸ್ವರ್ಣಾಭರಣ ಮಳಿಗೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ನೂತನವಾದ ತಾಂತ್ರಿಕ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ದ.ಕ. ಜಿಲ್ಲಾ ಅಡಿಷನಲ್ ಎಸ್.ಪಿ. ಅನಿಲ್ ಕುಮಾರ್ ಎಸ್. ಭೂಮ ರೆಡ್ಡಿ ತಿಳಿಸಿದರು.

ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ತಾಲೂಕಿನ ವಿವಿಧ ಬ್ಯಾಂಕ್ ಮ್ಯಾನೇಜರ್ ಹಾಗೂ ಸ್ವರ್ಣಾಭರಣ ಮಳಿಗೆಗಳ ಮಾಲಕರ ಸಭೆಯಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ದ.ಕ.ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ನಿಟ್ಟಿನಲ್ಲಿ ಬ್ಯಾಂಕ್ ಹಾಗೂ ಸ್ವರ್ಣಾಭರಣ ಮಳಿಗೆಯ ಸುರಕ್ಷತೆಗಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಈ ಸಭೆತನ್ನು ಆಯೋಜಿಸಲಾಗಿತ್ತು. ಬ್ಯಾಂಕ್ ಮತ್ತು ಸತವರ್ಣಾಭರಣ ಮಳಿಗೆಯಲ್ಲಿ ಗುಣಮಟ್ಟದ ಸಿ.ಸಿ. ಕ್ತಾಮರ ಅಳವಡಿಸುವಂತೆ ತಿಳಿಸಿದ ಅವರು ಪೊಲೀಸರು ನೀಡಿದ ಸೂಚನೆಗಳನ್ನು ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳಿಸಿವಂತೆ ಸೂಚಿಸಿದ  ಅವರು ತಮ್ಮ ವ್ಯವಹಾರಗಳನ್ನು ನಿರಾಂತಕವಾಗಿ ಮಾಡಲು ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಬಂಟ್ವಾಳ ಡಿ.ವೈ.ಎಸ್.ಪಿ. ವಿಜಯಪ್ರಸಾದ್ ಮಾತನಾಡಿ, ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿಗಳಲ್ಲಿ ಕಳ್ಳತನಗೈಯುವ ಪ್ರಕರಣಗಳು ಕೂಡ ಕಂಡುಬಂದಿದ್ದು,  ಅಂಗಡಿಗಳಿಗೆ ಬರುವ ಗ್ರಾಹಕರು ಮತ್ತು ಅಂಗಡಿ ಕೆಲಸಗಾರರ ಬಗ್ಗೆಯು ಮುಂಜಾಗೃತೆ ವಹಿಸಬೇಕು, ಸಂಶಯಾಶ್ಪದ ಗ್ರಾಹಕರು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಆನಂತಪದ್ಮನಾಭ, ಶಿವಕುಮಾರ್, ತಾಲೂಕಿನ ವಿವಿಧ ಬ್ಯಾಂಕ್ ಮ್ಯಾನೇಜರ್‌ಗಳು, ಜ್ಯುವೆಲ್ಲರಿ ಶಾಪ್‌ನ ಮಾಲಕರು ಉಪಸ್ಥಿತರಿದ್ದರು. 

ವಿಟ್ಲ ಎಸ್.ಐ. ರಾಮಕೃಷ್ಣ ಸ್ವಾಗತಿಸಿ, ಸಿಬ್ಬಂದಿ ವಿವೇಕ್ ರೈ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article