ಗತವನ್ನು ನೆನೆಯದೆ ಭವಿಷ್ಯ ನಿರ್ಮಿಸಲಾಗದು: ತಾರಾನಾಥ ಗಟ್ಟಿ

ಗತವನ್ನು ನೆನೆಯದೆ ಭವಿಷ್ಯ ನಿರ್ಮಿಸಲಾಗದು: ತಾರಾನಾಥ ಗಟ್ಟಿ


ಬ್ರಹ್ಮಾವರ: ಬಾರ್ಕೂರಿನಂತಹ ಐತಿಹಾಸಿಕ ಪ್ರದೇಶ ಚಾರಿತ್ರಿಕ ಕಾಲಘಟ್ಟದಲ್ಲಿ ತುಳುನಾಡಿನ ರಾಜಧಾನಿಯಾಗಿದ್ದು, ತನ್ನದೇ ವೈಶಿಷ್ಟ್ಯತೆಯನ್ನು ಹೊಂದಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು. 

ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾರ್ಕೂರು, ಇಲ್ಲಿ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಸಹಯೋಗದೊಂದಿಗೆ ನಡೆದ ಬಾರ್ಕೂರು – ಮರೆಯಲಾಗದ ತುಳುನಾಡಿನ ರಾಜಧಾನಿ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. 

ಗೋವಾ ವಿಶ್ವವಿದ್ಯಾನಿಲಯದ ಕಲಾ ನಿಕಾಯದ ಡೀನ್ ಮತ್ತು ಇತಿಹಾಸಕಾರರಾದ ಪ್ರೊ. ನಾಗೇಂದ್ರರಾವ್ ದಿಕ್ಸೂಚಿ ಭಾಷಣಗೈದರು. 

ಬಾರ್ಕೂರಿನ ಸಾಂಸ್ಕೃತಿಕ, ಆರ್ಥಿಕ ಮತ್ತು ಭೌಗೋಳಿಕ ಅನನ್ಯತೆ ತುಳುನಾಡು ಮತ್ತು ವಿಜಯನಗರ ಸಾಮ್ರಾಜ್ಯದ ನಡುವೆ ಬಾರ್ಕೂರು ಮುಖ್ಯ ಪ್ರದೇಶವಾಗಿದ್ದುದರ ಕುರಿತು ವಿವರಿಸಿದರು.

ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಭಾಸ್ಕರ್ ಶೆಟ್ಟಿ ಸಲ್ವಾಡಿ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಹೇಶ್ ಉಡುಪ, ತುಳು ಆಕಾಡೆಮಿ ರಿಜಿಸ್ಟಾರ್ ಪೂರ್ಣಿಮಾ, ಆಕಾಡೆಮಿ ಸದಸ್ಯರಾದ ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು. 

ವಿಚಾರ ಸಂಕಿರಣವು 3 ಪ್ರಮುಖ ಗೋಷ್ಟಿಗಳನ್ನು ಹೊಂದಿದ್ದು, ಪ್ರಾಕ್ತನಶಾಸ್ತ್ರ ವಿದ್ವಾಂಸ ಪ್ರೊ. ಮುರಗೇಶಿ, ಇತಿಹಾಸತಜ್ಞ ಪ್ರೊ. ಜಗದೀಶ ಶೆಟ್ಟಿ, ಮಾಹೆ ಮಣಿಪಾಲ ಪ್ರಾಧ್ಯಾಪಕಿ ಪ್ರೊ. ದೀಪಿಕಾ ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. 

ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಶೋಭಾ ಆರ್ ಸ್ವಾಗತಿಸಿ, ವಿಚಾರ ಸಂಕಿರಣದ ಸಂಚಾಲಕರಾದ ಅಮೃತಾ ವಂದಿಸಿದರು. ಸಮಾಜಕಾರ್ಯ ವಿಭಾಗದ ಡಾ. ಶ್ರೀದೇವಿ ಕೆ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article