ಕಬಡ್ಡಿ ಪಂದ್ಯಾಟದಲ್ಲಿ ಸಮರ್ಥ ನಿಧಿ ಲಿಮಿಟೆಡ್ ವತಿಯಿಂದ ಮಾಹಿತಿ ಹಂಚಿಕೆ
Saturday, September 27, 2025
ಕಡಬ: ರಾಮಕುಂಜದ ಶ್ರೀ ರಾಮಕುಂಜೇಶ್ವರ ಪದಪೂರ್ವ ಕಾಲೇಜು ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆ ವತಿಯಿಂದ ಸೆಪ್ಟಂಬರ್ 27 ಮತ್ತು 28 ರಂದು ಶ್ರೀ ರಾಮಕುಂಜೇಶ್ವರ ಕ್ರೀಡಾಂಗಣದ ಶ್ರೀ ವಿಶ್ವೇಶತೀರ್ಥ ವೇದಿಕೆಯಲ್ಲಿ ನಡೆಯುತ್ತಿರುವ ಮೈಸೂರು ವಿಭಾಗ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾಟ-2025 ಹಾಗೂ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಜೂರಿ ಖ್ಯಾತಿಯ ಆಳ್ವಾಸ್ ಸಾಂಸ್ಕೃತಿಕ ವೈಭವ ಮತ್ತು ಅಭಿನಂಧನಾ ಸಮಾರಂಭ, ತಾರೆಗಳ ಸಮಾಗಮ, ‘ಚುರುಮುರಿ’ ಹಾಸ್ಯ-ನೃತ್ಯ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಮರ್ಥ ನಿಧಿ ಲಿಮಿಟೆಡ್‌ನ ಪುತ್ತೂರು ಶಾಖೆಯ ವತಿಯಿಂದ ಸಮರ್ಥ ನಿಧಿ ಸಂಸ್ಥೆಯಲ್ಲಿ ದೊರಕುವ ಸವಲತ್ತುಗಳಾದ ಪಿಗ್ಮಿ, ಪಿಗ್ಮಿ ಸಾಲ, ವಾಹನ ಸಾಲ, ವಾಹನ ಇನ್ಸೂರೆನ್ಸ್, ಆರ್‌ಡಿ, ಎಫ್‌ಡಿ(FIXED DEPOSITE)ಯ ಬಗ್ಗೆ ಮಾಹಿತಿಯನ್ನು ಶಾಖೆಯ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಜನರಿಗೆ ನೀಡಿದರು.