
ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ಅವರಿಗೆ ತಿರುಗು ಬಾಣವಾಗಿದೆ: ಶುಭದರಾವ್
ಕಾರ್ಕಳ: ಕೇಂದ್ರದ ಬಿಜೆಪಿ ಸರಕಾರ ರಾಜ್ಯದಲ್ಲಿ 7.76 ಲಕ್ಷ ಶಂಕಾಸ್ಪದ ಪಡಿತರ ಚೀಟಿ ಇದೆ ಎಂದು ಗುರತಿಸಿ ಅದರಲ್ಲಿ 5.80 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳ ಕಾರ್ಡ್ ರದ್ದುಗೊಳಿಸುವಂತೆ ಸೂಚನೆ ನೀಡಿದ್ದು, ಇದು ಬಿಜೆಪಿ ಸರಕಾರದ ಬಡವರ ವಿರೋದಿ ಧೋರಣೆಯಾಗಿದ್ದು ಶಾಕರಿಗೆ ಬಡ ಜನರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರಕಾರ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಕೇಂದ್ರದ ಸರಕಾರದ ತೆರಿಗೆ ಮಂಡಲಿಯ ವರದಿ ಪ್ರಕಾರ ಕರ್ನಾಟಕದಲ್ಲಿ 5.80 ಲಕ್ಷ ಜನರು ಬಿಪಿಎಲ್ ಕಾರ್ಡ್ ಹೊಂದಲು ಅರ್ಹರಲ್ಲ ಅಂತವರ ಕಾರ್ಡ್ ಈ ತಿಂಗಳ 30 ರ ಒಳಗಾಗಿ ರದ್ದುಗೊಳಿಸುವಂತೆ ಸೂಚನೆ ನೀಡಿದ್ದು ಸರಿಯಲ್ಲ ಈ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ಕಾರ್ಕಳ ಕಾಂಗ್ರೆಸ್ ಮನವಿ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಕಾರ್ಕಳದಲ್ಲಿ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿ ರಾಜ್ಯ ಸರಕಾರ ಬಿಪಿಎಲ್ ಕಾರ್ಡ್ ರದ್ದು ಮಾಡುತಿದೆ ಎಂದು ಸುಳ್ಳು ಹೇಳಿ ಜನರಲ್ಲಿ ಭಯವನ್ನು ಹುಟ್ಟಿಸುವ ಕೆಲಸ ಮಾಡಿದ್ದರು ಆದರೆ ಕೇಂದ್ರ ಸರಕಾರದ ಸೂಚನೆ ಅವರಿಗೆ ತಿರುಗು ಬಾಣವಾಗಿದೆ ಸುಳ್ಳನ್ನೇ ಪ್ರತಿಪಾದಿಸುವ ಶಾಸಕರ ಮತ್ತೊಂದು ಸುಳ್ಳು ಕೇಂದ್ರ ಸರಕಾರದ ನೀಡಿದ ಸೂಚನೆಯಿಂದ ಬಹಿರಂಗಗೊಂಡಿದೆ, ಶಾಸಕರಿಗೆ ನಿಜವಾಗಿಯೂ ಬಡ ಜನರ ಕಾಳಜಿ ಇದ್ದರೆ ಈಗ ಮೌನ ಮುರಿದು ಪ್ರತಿಭಟಿಸಲಿ ಎಂದು ಸವಾಲು ಹಾಕಿದ್ದಾರೆ.
ಕೇಂದ್ರ ಬಿಜೆಪಿ ಸರಕಾರದ ಈ ನಿರ್ಧಾರದಿಂದ ಕ್ಷೇತ್ರದ ಜನರು ಭಯಪಡುವ ಅಗತ್ಯವಿಲ್ಲ ಈ ಜನ ವಿರೋಧಿ ನಿರ್ಧಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಬಡ ಜನರ ಯಾವುದೇ ಬಿಪಿಎಲ್ ಕಾರ್ಡ್ ರದ್ದು ಮಾಡುವ ಉದ್ದೇಶವನ್ನು ರಾಜ್ಯ ಸರಕಾರ ಹೊಂದಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧಕ್ಷ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.