
ರಸ್ತೆ ಅಪಘಾತ: ವಿದ್ಯಾರ್ಥಿಗಳಿಗೆ ಗಂಭೀರ ಗಾಯ
Wednesday, September 17, 2025
ಕಾಸರಗೋಡು: ಸ್ಕೂಟರ್ ಹಾಗೂ ವ್ಯಾನ್ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಉಪ್ಪಳ ಸಮೀಪದ ಬಾಯಾರು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಪೈವಳಿಕೆ ಕಳಾಯಿ ನಿವಾಸಿಗಳಾದ ಮುಹಮ್ಮದ್ ಸಾದಿಕ್ ಮತ್ತು ಮುಹಮ್ಮದ್ ಮೊಯ್ದಿನ್ ಗಾಯಗೊಂಡವರು.
ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೈವಳಿಕೆ ಖಾಸಗಿ ಶಾಲೆಯ ವಿದ್ಯಾರ್ಥಿಗಳಾಗಿದ್ದ ಇವರಿಬ್ಬರು ಇಂದು ಬೆಳಗ್ಗೆ ೭.೪೫ರ ಸುಮಾರಿಗೆ ಶಾಲೆಗೆ ತೆರಳುತ್ತಿದ್ದ ವೇಳೆ ಬಾಯಾರು ಪೆಟ್ರೋಲ್ ಬಂಕ್ ಬಳಿ ಈ ಅಪಘಾತ ನಡೆದಿದೆ.
ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.