ತಾಂತ್ರಿಕತೆಯ ದುರ್ಬಳಕೆಯೊಂದಿಗೆ ಸೈಬರ್ ಅಪರಾಧ: ನಜ್ಮಾ ಫಾರೂಕಿ

ತಾಂತ್ರಿಕತೆಯ ದುರ್ಬಳಕೆಯೊಂದಿಗೆ ಸೈಬರ್ ಅಪರಾಧ: ನಜ್ಮಾ ಫಾರೂಕಿ


ಮಂಗಳೂರು: ಇತ್ತೀಚೆಗೆ ನಡೆಯುತ್ತಿರುವ ಅಪರಾಧಗಳಲ್ಲಿ ತಾಂತ್ರಿಕತೆಯನ್ನು ದುರ್ಬಳಕೆ ಮಾಡಿ ಅಪರಾಧಗಳು ಸುಲಭವಾಗಿ ನಡೆಸಲು ಯತ್ನಿಸುತ್ತಾರೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು ಎಂದು ಮಂಗಳೂರು ಸಂಚಾರ ವಿಭಾಗದ ಸಹಾಯಕ ಆಯುಕ್ತೆ ನಜ್ಮಾ ಫಾರೂಕಿ ಹೇಳಿದರು.

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಹಾಗೂ ಸಂತ ಅಲೋಶಿಯಸ್ ತಾಂತ್ರಿಕ ವಿದ್ಯಾಲಯದ ಸಹಭಾಗಿತ್ವದಲ್ಲಿ ಸೈಬರ್ ಅಪರಾಧ ಹಾಗೂ ಮಾದಕ ವ್ಯಸನ ಮತ್ತು  ಸಂಚಾರ ನಿಯಮದ ಬಗ್ಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಇಂತಹ ದಂಧೆಗಳಲ್ಲಿ ತೊಡಗಿಸಿಕೊಂಡವರು ಹೆಚ್ಚಾಗಿ ಯುವಜನರನ್ನೇ ಗುರಿಯಾಗಿಸಿ ಕೊಂಡು ಪ್ರಚೋದನೆ ನೀಡುತ್ತಾರೆ. ಮನುಷ್ಯನ ಅತೀ  ಹತ್ತಿರದ ಹಾಗೂ ಅತೀ ದೊಡ್ಡ ಸ್ನೇಹಿತ ಸದಾ ನಾವು ಬಳಸುತ್ತಿರುವ ಮೊಬೈಲ್ ಫೋನ್ ಮೂಲಕವೇ ನಮಗೆ ತಿಳಿಯದೆ ಸೈಬರ್ ಕ್ರೈಂ ಹುಟ್ಟಿಕೊಳ್ಳುತ್ತದೆ. ನಾವು ಯಾವುದೇ ವಸ್ತುಗಳನ್ನು ಖರೀದಿಸುವ ಸಂದರ್ಭದಲ್ಲಿ ಅಥವಾ ಯಾವುದೇ ಕಚೇರಿಗಳಲ್ಲಿ ವ್ಯವಹರಿಸುವ ಸಂದರ್ಭದಲ್ಲಿ ನಮ್ಮ ಫೋನ್ ನಂಬರ್, ನಮ್ಮ ಆಧಾರ್ ಕಾರ್ಡ್ ನೊಂದಣಿ ಸಂಖ್ಯೆಯೂ ಸೇರಿದಂತೆ ನಮ್ಮ ವೈಯುಕ್ತಿಕ ಮಾಹಿತಿಯನ್ನು ಪಡೆಯುತ್ತಾರೆ. ಆದರೆ ಇದನ್ನೇ ಅಧಾರವಾಗಿ ಇಟ್ಟುಕೊಂಡು ಆ ಕಚೇರಿಯಲ್ಲಿ  ದುಡಿಯುತ್ತಿರುವ ಕೆಲವೆಂದರೆ ಕಿಡಿಗೇಡಿಗಳು ದುರುಪಯೋಗಿಸುವ ಸಾಧ್ಯತೆಗಳು ಇವೆ. ಪೊಲೀಸ್ ಇಲಾಖೆಯ ತನಿಖೆಗಳಿಂದ ಇಂತಹ ಅನೇಕ ಘಟನೆಗಳು ಕಂಡು ಬಂದಿವೆ. ಅಪರಿಚಿತರಿಗೆ ವೈಯುಕ್ತಿಕ ಮಾಹಿತಿಗಳನ್ನು ನೀಡದಂತೆ ಎಚ್ಚರಿಕೆ ವಹಿಸಿಬೇಕು ಎಂದರು.

ಮಾದಕ ದ್ರವ್ಯ ಜಾಲ ವಿದ್ಯಾರ್ಥಿಗಳನ್ನೇ ಗುರಿಯಾಗಿಟ್ಟು ಕೊಂಡು ಹೆಚ್ಚಾಗಿ ನಡೆಸಲಾಗುತ್ತಿದೆ. ಇಂತಹ ಕೃತ್ಯಗಳಲ್ಲಿ ತೊಡಗಿಸಿ ಕೊಂಡಿರುವವರಿಂದ ಎಚ್ಚರದಿಂದಿರಬೇಕು ಹಾಗೂ ಅಂತಹವರನ್ನು ಗುರುತಿಸಿ ಪೊಲೀಸ್‌ರಿಗೆ ಮಾಹಿತಿ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಅವರು ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಸಂಚಾರ ವ್ಯವಸ್ಥೆ ಹಾಗೂ ಉಲ್ಲಂಘನೆಯ ಶಿಕ್ಷೆ ಹಾಗೂ ಪರಿಣಾಮವನ್ನು ತಿಳಿಸಿದರು.

ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ವಂ. ಜಾನ್ ಡಿಸೋಜ ಎಸ್.ಜೆ., ಪ್ರಾಂಶುಪಾಲ ರೋಶನ್ ಡಿ’ಸೋಜ, ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟ, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ಯೂಥ್ ಸರ್ವಿಸ್ ಡೈರೆಕ್ಟರ್ ಜಾಕ್ಸನ್, ಅನಿಲ್ ಆಳ್ವ, ಉಪ ಪ್ರಾಂಶುಪಾಲ ಆಲ್ವಿನ್ ಮೆನೇಜಸ, ಟ್ರೈನಿಂಗ್  ಆಫೀಸರ್‌ಗಳಾದ ನೋಯಲ್ ಲೋಬೋ ಮತ್ತು ವಿಲ್ಸನ್, ಶಿಕ್ಷಕರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article