
ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು
Sunday, September 21, 2025
ಕಾಸರಗೋಡು: ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ತ್ರಿಕ್ಕರಿಪ್ಪುರ ಕವ್ವಾಯಿ ಎಂಬಲ್ಲಿ ನಡೆದಿದೆ.
ವಲಿಯಪರಂಬ ಬೀರಾನ್ ಕಡವಿನ ನಿಸಾರ್ ಎಂಬವರ ಪುತ್ರ ಕೆ.ಪಿ. ಮುಹಮ್ಮದ್ (13) ಮೃತ ಪಟ್ಟವರು.
ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ. ಮೀನು ಹಿಡಿಯಲು ಗಾಳ ಹಾಕುತ್ತಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ಈ ದುರ್ಘಟನೆ ನಡೆದಿದೆ. ನಾಗರಿಕರು, ಅಗ್ನಿಶಾಮಕ ದಳದ ಸಿಬ್ಬಂದಿ ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿದರೂ ಜೀವ ಉಳಿಸಲಾಗಲಿಲ್ಲ. ಮುಹಮ್ಮದ್ ಇಲಂಬಚ್ಚಿಯ ಖಾಸಗಿ ಹಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದನು. ತ್ರಿಕ್ಕರಿಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.